ಗಣೇಶೋತ್ಸವ ಈದ ಮೀಲಾದ ಸೌರ್ಹಾದತೆಯಿಂದ ಆಚರಿಸಿ: ಕಾಮನ್ಬೈಲು
ಘಟಪ್ರಭಾ 04: ಗಣಪತಿ ಹಬ್ಬ ಹಾಗೂ ಈದ ಮೀಲಾದ ಒಂದೇ ದಿನ ಬಂದಿರುವುದರಿಂದ ಎಲ್ಲ ಬಾಂಧವರು ಸೌರ್ಹಾದತೆಯಿಂದ ಆಚರಿಸಬೇಕೆಂದು ಘಟಪ್ರಭಾ ಪೊಲೀಸ್ ಪಿ.ಐ ಬಸವರಾಜು ಕಾಮನ್ಬೈಲು ಹೇಳಿದರು.
ಅವರು ರವಿವಾರ ಸಂಜೆ ಘಟಪ್ರಭಾ ಪೊಲೀಸ ಠಾಣೆಯ ಆವರಣದಲ್ಲಿ ಗಣಪತಿ ಹಾಗೂ ಈದ ಮೀಲಾದ ಹಬ್ಬದ ನಿಮಿತ್ಯ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಗಣಪತಿ ಹಬ್ಬ ಹಾಗೂ ಪ್ರವಾದಿ ಮೊಹ್ಮದ ಪೈಗಂಬರರ ಜಯಂತಿ ಒಂದೇ ದಿನ ಬರುವುದರಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರುಗಳು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದ ಹಾಗೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪಿಎಸ್ಐ ಕಣವಿ ಹಾಗೂ ಹಿಂದೂ ಸಮಾಜದ ಮುಖಂಡರಾದ ಬಸವರಾಜ ಹುದ್ದಾರ ಮತ್ತು ಮುಸ್ಲಿಂ ಸಮಾಜದ ಮುಖಂಡರಾದ ಮಹಮ್ಮದ ಮೋಮಿನ ಸಭೆಯನ್ನೇದ್ದೀಶಿಸಿ ಮಾತನಾಡಿದರು.
ಪಿಎಸ್ಐ ಬಿರಾದರ, ಹಿರಿಯರಾದ ಜಿ.ಎಸ್. ರಜಪೂತ, ಶೌಕತ ಕಬ್ಬೂರ, ಮುಸ್ತಾಕ ಖಾಜಿ, ದಾದಾಪೀರ ಶಾಬಾಶಖಾನ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಅಪ್ಪಾಸಾಬ ಮುಲ್ಲಾ, ರೆಹಮಾನ ಮೊಕಾಶಿ, ದಿಲಾವರ ನಧಾಪ, ಮಲ್ಲಿಕಾರ್ಜುನ ಗೌರಾಣಿ, ರಾಜು ಬಬಲಾದಿ, ಕಾಶೀನಾಥ ರಾಜನ್ನವರ, ವಿಠ್ಠಲ ಕರೋಶಿ, ಚಾಂದಸಾಬ ಮೋಮಿನ, ಅರುಣ ದೇಶಪಾಂಡೆ, ವಿನೋದ ಸುಲ್ತಾನಪೂರೆ ಹಾಗೂ ಸಿಬ್ಬಂದಿ ಬಿ.ಎಸ್.ನಾಯಿಕ ಸೇರಿದಂತೆ ಘಟಪ್ರಭಾ, ಶಿಂದಿಕುರಬೇಟ, ಧುಪದಾಳ ಹಾಗೂ ಸಂಗನಕೇರಿ ಗ್ರಾಮದ ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು.