ವಕೀಲರ ಸಂಘದಿಂದ ಶಿವಕುಮಾರ ಶ್ರೀಗಳ ಪುಣ್ಯಾರಾಧನೆ
ರಾಣಿಬೆನ್ನೂರ 21: ವಕೀಲರ ಸಂಘದ ಸಭಾಭವನದಲ್ಲಿ ತುಮಕೂರು ಶ್ರೀ ಸಿದ್ದಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳವರ 2ನೇ ವರ್ಷದ ಪುಣ್ಯಾರಾಧನಾ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಸರಳವಾಗಿ ಭಾವ, ಭಕ್ತಿಯೊಂದಿಗೆ ನೆರವೇರಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶÀ ಅಣ್ಣುಗೌಡ ಪಾಟೀಲ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಕಮತೆ, 2ನೇ ಹೆಚ್ಚುವರಿ ಹಿರಿಯ ವಿಭಾಗದ ನ್ಯಾಯಾಧೀಶ ಜೆ.ವಿ.ಕುಲಕರ್ಣಿ, 3ನೇ ಹೆಚ್ಚುವರಿ ಹಿರಿಯ ವಿಭಾಗದ ನ್ಯಾಯಾಧೀಶ ಎಸ್.ಶರವಣನ್, ಪ್ರಧಾನ ಧಿವಾಣಿ ನ್ಯಾಯಾಧೀಶ ಯೋಗೇಶ್ ಜೆ ಅವರು ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕುಮಾರ ಡಿ ಮಡಿವಾಳರ, ಕಾರ್ಯದರ್ಶಿ ಜಿ.ಕೆ.ಮುಂಡಾಸದ, ಸಹಕಾರ್ಯದರ್ಶಿ ದಿಲೀಪ ಹಳ್ಳಳ್ಳಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಹರವಿ, ವೇದಮೂರ್ತಿ ಹಿರೇಮಠ, ಮಂಜನಗೌಡ ಹೊಸಗೌಡರ, ಸಂಜೀವ ಚೆನ್ನಗೌಡ್ರ, ಪ್ರಭು ಶಿರಗಂಬಿಯವರ, ರಾಜು ಬಿದರಿ, ಪ್ರಶಾಂತ್ ಯಕನಹಳ್ಳಿ, ನಭಿ ಹಿರೇಬಿದರಿ, ಸವಿತಾ ಮೋರೆ,ಎನ್.ಎಂ.ಮುಗಳಿಶೆಟ್ಟರ್, ಆರ್.ವಿ.ದೊಡ್ಡದ್ಯಾವಣ್ಣನವರ, ಆರ್.ಬಿ.ಸೊರಟೂರು, ಪಿ.ಬಿ.ಗೊಡ್ಡೆಮ್ಮಿ, ಸರಸ್ವತಿ ಕಮದೋಡ, ಸುಮಾ ಸಾವುಕಾರ, ಎಸ್.ಡಿ.ದೊಡ್ಡಚಿಕ್ಕಣ್ಣನವರ, ಆರ್.ಬಿ.ಪಾಟೀಲ, ಎಂ.ಬಿ.ಚಿನ್ನಪ್ಪನವರ, ಆರ್.ಬಿ.ಮಡಿವಾಳರ ಸೇರಿದಂತೆ ಹಿರಿಯ ಹಾಗೂ ಕಿರಿಯ ನ್ಯಾಯವಾಧಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾರ್ವಜನಿಕವಾಗಿ ಶ್ರೀಗಳವರ ಪುಣ್ಯಾರಾಧನ ನಿಮಿತ್ತ ಸಂಘದಿಂದ ಮಹಾ ಅನ್ನಪ್ರಸಾದ ವಿತರಿಸಲಾಯಿತು.