ಹೂವಿನಹಡಗಲಿಯಲ್ಲಿ ಜಾನುವಾರು ಕಳ್ಳತನ; ಆತಂಕದಲ್ಲಿ ರೈತರು
ಹೂವಿನಹಡಗಲಿಯಲ್ಲಿ ಜಾನುವಾರು ಕಳ್ಳತನ; ಆತಂಕದಲ್ಲಿ ರೈತರು
ಹೂವಿನಹಡಗಲಿ 29: ತಾಲೂಕಿನಲ್ಲಿ ಈಚೆಗೆ ಜಾನುವಾರುಗಳ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದುರೈತರುಆತಂಕಕ್ಕೆಕಾರಣವಾಗಿದೆ. ತಾಲ್ಲೂಕಿನ ನಂದಿಹಳ್ಳಿ ಗ್ರಾಮದರೈತರೊಬ್ಬರ ಹಿತ್ತಲಿನ ಕೊಟ್ಟಿಗೆಯಲ್ಲಿಕಟ್ಟಿದ್ದ ಮೂರುಜಾನುವಾರು ಬುಧವಾರರಾತ್ರಿ ಕಳವಾಗಿವೆ.ರೈತ ದೇವರಮನಿ ಗೋಣೆಪ್ಪಅವರಿಗೆ ಸೇರಿದ ಮಿಶ್ರತಳಿಯ ಮೂರು ಆಕಳುಗಳು ಕಳವಾಗಿವೆ. ಹಿತ್ತಲ ಸಮೀಪ ವಾಹನ ಓಡಾಡಿರುವ ಗುರುತುಗಳಿದ್ದು, ಕಳ್ಳರು ಜಾನುವಾರನ್ನು ಟಾಟಾಏಸ್ ವಾಹನದಲ್ಲಿ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಜನವರಿಯಲ್ಲಿ ಪಟ್ಟಣದಲ್ಲಿಜಾನುವಾರು ಸರಣಿ ಕಳವು ಪ್ರಕರಣಗಳು ನಡೆದಿದ್ದವು. ಹೊಳಗುಂದಿ ಹಾಗೂ ಇತರ ಗ್ರಾಮಗಳಲ್ಲಿ ಆಕಳುಗಳು ಕಳುವಾಗಿದ್ದವು