ರಾಜ ರಾಜೇಶ್ವರಿ ಕಾಲೇಜನಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ
ರಾಣೆಬೆನ್ನೂರು 24: ಇಂದಿನ ಕೆಎಲ್ಇ ಶಿಕ್ಷಣ ಸಂಸ್ಥೆಯ, ರಾಜರಾಜೇಶ್ವರಿ ಕಲಾ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ಬುಧವಾರ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಐಸಿಐಸಿಐ ವಿಭಾಗಿಯ ಮುಖ್ಯಸ್ಥ, ಪ್ರೇಮ್ ಕುಮಾರ್ ಪರದೇಶಿ, ಅವರು ಮಾತನಾಡಿ, ಶಿಕ್ಷಣ ವ್ಯವಸ್ಥೆ ಸ್ಪರ್ಧಾತ್ಮಕವಾಗಿದೆ, ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಶಿಕ್ಷಣ ಪೂರಕವಾದ ವಾತಾವರಣವು ಎಲ್ಲೆಡೆಯೂ ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಆದರೆ ದೊರಕಿರುವ ಅವಕಾಶಗಳನ್ನು ತಪ್ಪಿಸಿಕೊಳ್ಳದೆ ಸಮರ್ಥವಾಗಿ ಬಳಸಿಕೊಂಡು ಉದ್ಯೋಗವನ್ನು ಪಡೆಯಬೇಕಾದ ಅಗತ್ಯವಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ತಂಡದ ಮುಖ್ಯಸ್ಥ ಆದರ್ಶ ಕೆ. ಅವರು ಅವಕಾಶಗಳು ಮನೆಬಾಗಿಲಿಗೆ ಬರುತ್ತಲಿವೆ ಅವುಗಳನ್ನು ಪಡೆದುಕೊಂಡು ಜೀವನ ಭದ್ರತೆ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ,ಕಾಲೇಜು ಪ್ರಾಚಾರ್ಯ ನಾರಾಯಣ ನಾಯಕ ಎ. ಅವರು ಮಾತನಾಡಿ, ಹೊಸ ಹೊಸ ಆವಿಷ್ಕಾರಗಳಿಂದ ನಮ್ಮ ವಿದ್ಯಾರ್ಥಿಗಳ ಶಿಕ್ಷಣ ಕೌಶಲ್ಯವನ್ನು ಹೆಚ್ಚಾಗುತ್ತಲಿದೆ. ಕೇವಲ ವೈಟ್ ಕಲರ್ ಜ್ವಾಬ್ ಗಾಗಿ ಕಾಯುವುದಕ್ಕಿಂತ, ಸಿಗುವ ಅವಕಾಶಗಳನ್ನು ಪಡೆದುಕೊಂಡು, ಭವಿಷ್ಯದ ಭದ್ರತೆಗಾಗಿ ಮುಂದೆ ಪುನಹ ಹುಡುಕಾಟವನ್ನು ಮಾಡಬಹುದಾಗಿದೆ, ಎಂದ ನಾಯಕ್ ಅದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಲು ಮುಂದಾಗಬೇಕು ಎಂದರು. ನಾಲ್ಕು ದಿವಸಗಳ ಕಾಲ ನಡೆಯುವ ಕ್ಯಾಂಪಸ್ ಸಂದರ್ಶನದಲ್ಲಿ ಆಕ್ಸಿಸ್ ಬ್ಯಾಂಕ್, ರಿಲಿಯನ್ಸ್, ರಿಟೇಲ್ ಸಿಂಶ್ನೆಸ್ಟ್, ವಲ್ಲೆ ಆವಾಜ ಸೇರಿದಂತೆ ಮತ್ತಿತರೆ ಕಂಪನಿಗಳು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ನಬೀಸಾಬ್. ಎ. ಪ್ಲೇಸ್ಮೆಂಟ್ ಅಧಿಕಾರಿ ಬಸಲಿಂಗಯ್ಯ ಹಿರೇಮಠ, ಕಾರ್ತಿಕ್ ಹೂಗಾರ್, ಸೇ ರಿದಂತೆ ಕಾಲೇಜು ಉಪನ್ಯಾಸಕರು ಮತ್ತಿತರ ಗಣ್ಯರು ಸಿಬ್ಬಂದಿ ಉಪಸ್ಥಿತರಿದ್ದರು. ಮಹಾಲಕ್ಷ್ಮಿ ಧಲ ಬಂಜನ್, ಪ್ರಾರ್ಥಿಸಿದರು. ದಿವ್ಯ ಬ್ಯಾಡಗಿ ಸ್ವಾಗತಿಸಿದರು. ಸ್ನೇಹಾ ಇರಕಲ್ ನಿರೂಪಿಸಿ, ಚಂದನಾ ಹೊನ್ನಾಳಿ ವಂದಿಸಿದರು.