ಇತರ ನಗರಗಳು

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತ ಕ್ರಮಕ್ಕೆ ಸಾಳುಂಕೆ ಕರೆ

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತ ಕ್ರಮಕ್ಕೆ ಸಾಳುಂಕೆ ಕರೆ

ಲೋಕದರ್ಶನ ವರದಿ

ಮುಂಡಗೋಡ 17: ತಾಲೂಕಿನ ಪ್ರತಿ ಗ್ರಾ.ಪಂ.ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪನೆ ಮಾಡುವುದರ ಬಗ್ಗೆ ಪಿಡಿಒಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಎಂದು ಇಲ್ಲಿನ ಪ್ರಭಾರ ಇಒ ಮಂಜುನಾಥ ಸಾಳುಂಕೆ ಹೇಳಿದರು.    

                ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪಿಡಿಒಗಳು ತಹಸೀಲ್ದಾರ ಮಂಜೂರಿ ಮಾಡಿದ 94ಸಿ. ಉತಾರಗಳನ್ನು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿಯೇ ಆದಷ್ಟು ಬೇಗ ಮಾಡಿಕೊಡಬೇಕು ಎಂದು ಸೂಚಿಸಿದರು ಮತ್ತು ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಲ್ಲಿ ಹೊಸ ರೇಶನ್ ಕಾಡರ್ುಗಳನ್ನು ಮಾಡಿಸಲು ಬಂದಾಗ ಕೂಡಲೇ ಆನ್ಲೈನ್ನಲ್ಲಿ ದಾಖಲು ಮಾಡಿಕೊಡಬೇಕು ಎಂದು ಹೇಳಿದರು.

                ಕೃಷಿ ಅಧಿಕಾರಿ ಮಾತನಾಡಿ ಮಂಗಳವಾರ ತಾಲೂಕಿನಲ್ಲಿ 53ಮಿ.ಮಿ. ಉತ್ತಮ ಮಳೆಯಾಗಿದ್ದು ಭತ್ತಕ್ಕೆ ಅನುಕೂಲ ಮತ್ತು ಗೋವಿನಜೋಳಕ್ಕೆ ತೇವಾಂಶ ಹೆಚ್ಚಾಗಿದೆ ಮತ್ತು  ಈಗಾಗಲೇ ಶೇ.60ರಷ್ಟು ಗೋವಿನಜೋಳದ ಬೆಳೆ ಕಟಾವು ಆಗಿದ್ದು ರೈತರು ಕಾಳುಗಳನ್ನು ರಸ್ತೆಗಳ ಮೇಲೆ ಒಣಗಿಸುತ್ತಿದ್ದಾರೆ ಎಂದರು. ಇದಕ್ಕಾಗಿ ತಾಡಪತ್ರಿಗಳ ವ್ಯವಸ್ಥೆಯಾಗಬೇಕು. ತಾಲೂಕಿನಲ್ಲಿ 270ಕೃಷಿ ಹೊಂಡಗಳನ್ನು ನಿಮರ್ಾಣ ಮಾಡಲಾಗಿದ್ದು ಸಾಕಷ್ಟು ನೀರು ಸಂಗ್ರಹವಾಗಿದೆ ಎಂದರು. ಈ ಮಧ್ಯೆ ಮಾತನಾಡಿದ ತಾ.ಪಂ.ಸದಸ್ಯ ರಮೇಶ ರಾಯ್ಕರ ಭತ್ತದ ಬೆಳೆಯ ಆಣೆವಾರಿ ಮತ್ತು ಗೋವಿನ ಜೋಳದ ಬೆಂಬಲ ಬೆಲೆ ರೈತರಿಗೆ ಸರಿಯಾಗಿ ಸಿಗುವಂತಾಗಬೇಕು ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.   ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ್ ಆರೋಗ್ಯಾಧಿಕಾರಿಯ ಕರ್ತವ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯಕ್ಕೆ ಹಾಜರಾದಾಗಿನಿಂದ ಇಂದಿನವರೆಗೆ ಒಂದೂ ಕೆಡಿಪಿ ಸಭೆಗೆ ಹಾಗೂ ಸಕರ್ಾರಿ ಕಾರ್ಯಕ್ರಮಗಳಿಗೆ ಹಾಜರಾಗಿರುವುದಿಲ್ಲ. ಸರಿಯಾದ ವೇಳೆಗೆ ಆಸ್ಪತ್ರೆಗೆ ಕರ್ತವ್ಯಕ್ಕೆ ಬರುತ್ತಿಲ್ಲ. ಫೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ನಮ್ಮದು ಹಿಂದುಳಿದ ತಾಲೂಕಾಗಿದ್ದು ನಿತ್ಯ ನೂರಾರು ಬಡ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಸರಿಯಾದ ಚಿಕಿತ್ಸೆ ಸಿಗುವಂತಾಗಬೇಕು ಎಂದರು.

  ತಾ.ಪಂ.ಉಪಾಧ್ಯಕ್ಷ ಕೃಷ್ಣಮೂತರ್ಿ ನಾಡಿಗ ಮಾತನಾಡಿ ಮಳಗಿಯ ದಾಸನಕೊಪ್ಪದ ರಸ್ತೆಯಲ್ಲಿರುವ ಕೆರೆಯ ಹತ್ತಿರ ಗಿಡಗಂಟೆಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

                ಈ ವೇಳೆ ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪಿಡಿಒಗಳು ಇದ್ದರು. ಸಭೆಯಲ್ಲಿ ತಾ.ಪಂ.ಸದಸ್ಯರ ಗೈರು ಹಾಜರಿ ಇದ್ದು ಕಾಟಾಚಾರಕ್ಕೆ ಸಭೆಯನ್ನು ನಡೆಸಿದಂತೆ ಕಂಡು ಬಂದಿತು. 

ಸುದ್ದಿ ಓದಿ