ರಾಣೆಬೆನ್ನೂರ

ಪರಿಸರ ಜಾಗೃತಿಗಾಗಿ ಸೈಕಲ್ ಮ್ಯಾರಾಥಾನ್‍ಗೆ ಚಾಲನೆ

ಪರಿಸರ ಜಾಗೃತಿಗಾಗಿ ಸೈಕಲ್ ಮ್ಯಾರಾಥಾನ್‍ಗೆ ಚಾಲನೆ

ರಾಣೀಬೆನ್ನೂರ ಜ 27: ಸುತ್ತಮುತ್ತಲಿರುವ ವಾತಾವರಣವನ್ನು ಸುಚಿತ್ವದಿಂದ ಕಾಯ್ದುಕೊಳ್ಳಲು ಇಂತಹ ಬೈಸಿಕಲ್ ಥಾನ್ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿ ಪುರಸ್ಕೃತ ಹಲಗೇರಿ ಪಿಎಸ್‍ಐ ಕೆ.ಸಿ.ಕೋಮಲಾಚಾರ್ ಹೇಳಿದರು. ನಗರದ ಪಿಬಿ ರಸ್ತೆಯ ಖಂಡೇಬಾಗೂರು ಪಾಟೀಲ ಸಭಾಂಗಣದಲ್ಲಿ ಸ್ಥಳೀಯ ಫರ್ನ್ ಕೈಂಡ್ ಲೈಫ್ ಆಯೋಜಿಸಿದ್ದ ಪರಿಸರ ಸೈಕಲ್ ಜಾಥಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಫರ್ನ್ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಕುಮಾರ ವಿಜಾಪುರ ಮಾತನಾಡಿದರು.  ಜಾಥಾ ಕಾರ್ಯಕ್ರಮದಲ್ಲಿ ಸಂಚಾರಿ ಠಾಣಾ ಪಿಎಸ್‍ಐ ವಿಆರ್ ಮುಂದಿನಮನಿ, ಬಿವೈಎಸ್ಟಿ ಅಧ್ಯಕ್ಷ ಆರ್.ಎನ್.ರಾಠೋಡ, ಜಿಲ್ಲಾ ಪತಂಜಲಿ ಪ್ರಭಾರಿ ರವೀಂದ್ರ ಬಿಜಾಪುರ, ಪದಾಧಿಕಾರಿ ಅಭಿಷೇಕ, ನಿನಾದ, ತನುಷಾ, ಅನುಶ್ರೀ, ಮೋನಿಷಾ ಸೇರಿದಂತೆ ಮತ್ತಿತರ ಸದಸ್ಯರು ಗಣ್ಯರು ಪಾಲ್ಗೊಂಡಿದ್ದರು. ಖಂಡೆಬಾಗೂರು ಸಭಾಂಗಣದಿಂದ ಆರಂಭಗೊಂಡ ಫರ್ನ್ ಕೈಂಡ್ ಲೈಪ್ ಸಂಸ್ಥೆಯ ಉದ್ದೇಶಿತ ಧ್ಯೇಯ ವಾಕ್ಯದೊಂದಿಗೆ ನೂರಾರು ಯುವಕರ ಸೈಕಲ್ ಜಾಥಾ ಪರಿಸರ ಜಾಗೃತಿ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ನಗರಸಭಾ ಕ್ರೀಡಾಂಗಣದಲ್ಲಿ ರ‍್ಯಾಲಿ ಸಾಂಗತ್ಯಗೊಂಡು ಅಲ್ಲಿ ಸೇವಾ ಕಾರ್ಯ ಮೆರೆದವರಿಗೆ ಪ್ರಶಸ್ತಿ ಫಲಕಗಳನ್ನು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. 


ಸುದ್ದಿ ಓದಿ