ಸಂಗೊಳ್ಳಿ ಗ್ರಾಮದಲ್ಲಿ ಸಿಎಸ್‌ಸಿ ಕೇಂದ್ರ ಉದ್ಘಾಟನೆ
ಲೋಕದರ್ಶನ ವರದಿ
ಬೈಲಹೊಂಗಲ 25: ರಾಜ್ಯಾದ್ಯಂತ ಪ್ರಸ್ತುತ ವರ್ಷದಲ್ಲಿ 6000 ಸಿಎಸ್‌ಸಿ ಕೇಂದ್ರಗಳನ್ನು ಉದ್ಘಾಟನೆ ಮಾಡುತ್ತಿದ್ದು ಗ್ರಾಮದ ಎಲ್ಲ ವರ್ಗದ ಸದಸ್ಯರು ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಯೋಜನಾ ನಿರ್ದೇಶಕ ಪ್ರದೀಪ ಶೆಟ್ಟಿ ಹೇಳಿದರು.
ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ವತಿಯಿಂದ ಸಿಎಸ್‌ಸಿ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡಿ, ಈ ಕೇಂದ್ರದಲ್ಲಿ ಸುಮಾರು 700 ತರಹದ ಸೌಲಭ್ಯಗಳಿದ್ದು ಮುಖ್ಯವಾಗಿ ಕೂಲಿಕಾರ್ಮಿಕರ ಕಾರ್ಡು ಆಧಾರ ತಿದ್ದುಪಡೆ ಮಾಡುವುದು ಈಶ್ರಮ ಕಾರ್ಡ ರೇಷನ್ ಕಾರ್ಡ್ . ಪಾನ್ ಕಾರ್ಡ್ .ಬ್ಯಾಂಕ್ ಅಕೌಂಟ್ ಮಾಡಿಸುವುದು ಇನ್ನಿತರೆ ಸೌಲಭ್ಯಗಳನ್ನು ಈ ಕೇಂದ್ರದಲ್ಲಿ ಪಡೆಯಬಹುದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ.ಅಧ್ಯಕ್ಷ ಪಕ್ಕಿರ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಮಡಿವಾಳಪ್ಪ ಉರಬಿನ್ , ಶಿವಪ್ಪ ಕೊಡ್ಲಿ ಹಾಗೂ ತಾಲ್ಲೂಕಿನ ಯೋಜನಾಧಿಕಾರಿಗಳಾದ ಪ್ರಶಾಂತ್ ನಾಯ್ಕ್ ವಲಯದ ಮೇಲ್ವಿಚಾರಕರಾದ ಸಂತೋಷ್ ಗೌಡ ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮದ ಎಲ್ಲ ವರ್ಗದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.