ಸಿ ಎಸ್ ನಾಡಗೌಡ ಆರ್ ಎಂ ಎಸ್ ಎ ಶಾಲೆಗೆ ಭೇಟಿ ನೀಡಿ ಪರಿಶಿಲನೆ
ಮುದ್ದೇಬಿಹಾಳ 02: ಹೊರವಲಯದ ಬಿದರಕುಂದಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ದೇವರಾಜು ಅರಸು ವಸತಿ ನಿಲಯ ಉದ್ಘಾಟನೆಗೆ ಆಗಮಿಸಿದ ವೇಳೆ ಜನಪ್ರೀಯ ಶಾಸಕರು ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾದ ಅಪ್ಪಾಜಿ ನಾಡಗೌಡರು ಸಮೀಪದ ಆದರ್ಶ ವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದರು. ಶಾಲೆಯ ತರಗತಿಗಳು , ಬಿಸಿ ಊಟದ ಕೋಣೆ, ಸ್ಮಾರ್ಟ ಕ್ಲಾಸ್ ಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶಿಲನೆ ನಡೆಸಿದರು ಶಾಲೆಯಲ್ಲಿನ ಸ್ಮಾರ್ಟ್ ಬೋರ್ಡಗಳನ್ನು ಸ್ವತಃ ಬಳಸಿ ಪಾಠ ಹೇಳಿಕೊಡುವ ತಂತ್ರಜ್ಞಾನದ ಮಾಹಿತಿ ನೀಡುತ್ತಾ ಇನ್ನೂ ಒಂದು 90 ಇಂಚಿನ ಇಂಟರ್ ???ಕ್ಟೀವ್ ಬೋರ್ಡ್ ಒದಗಿಸುವ ಇಂಗಿತ ವ್ಯಕ್ತಪಡಿಸಿದರು. ಮಕ್ಕಳಿಗೆ ಪ್ರತ್ಯೇಕವಾಗಿ ಕುಳಿತುಕೊಂಡು ಊಟ ಮಾಡಲು ಹಾಗೂ ಬಿಸಿಯೂಟ ತಯಾರಿಸಲು ಬಿಸಿಯೂಟದ ಕೇಂದ್ರ ಹಾಗೂ ಭೋಜನಾಲಯವನ್ನು ಮಂಜೂರಿ ಮಾಡಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯಿಂದ ಹಾಗೂ ವಸತಿನಿಲಯದಿಂದ ಮುಖ್ಯರಸ್ತೆಗೆ ಅತ್ಯಂತ ಸಮೀಪದಿಂದ ಪ್ಲಾಟ್ ಗಳ ಮಾರ್ಗವಾಗಿ ಸಂಪರ್ಕಿಸಲು 60 ಅಡಿ ರಸ್ತೆ ನಿರ್ಮಿಸಲು ಟೌನ್ ಪ್ಲಾನಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುದ್ಧ ಕುಡಿಯುವ ನೀರಿನ ಬಗ್ಗೆ, ಶಾಲೆಯ ಉದ್ಯಾನವನ ಬಗ್ಗೆ ಕ್ರಿಯಾ ಯೋಜನೆಯಲ್ಲಿ ಹಾಕಿಕೊಂಡು ಈಡೇರಿಸುವ ಭರವಸೆ ನೀಡಿದರು.
ವರ್ಗ ಕೊಠಡಿಗಳನ್ನು ಪರೀಶೀಲಿಸಿ ಸ್ವಚ್ಛತೆ ಕಾಪಾಡುವ ಬಗ್ಗೆ ಶಿಕ್ಷಕರಿಗೆ ಸೂಚಿಸಿದರು. ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಉತ್ತಮ ಫಲಿತಾಂಶ ಬರುವಂತೆ ಪ್ರಯತ್ನಿಸಲು ಶಿಕ್ಷಕರಿಗೆ ಸೂಚಿಸಿದರು. ಶಿಕ್ಷಕರ ಕೊರತೆ ಬಗ್ಗೆ ವಿಚಾರಿಸಿದರು. ಈ ವೇಳೆಯಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಗುಂಡಣ್ಣ ಕೊಟಗಿ, ಬಿ.ಆರ್.ಸಿ. ಯು. ಬಿ. ಧರಿಕಾರ, ಎಸ್.ಎಸ್. ರಾಮಥಾಳ, ಶಿಕ್ಷಕರಾದ ಸಂಗಮೇಶ ಸಜ್ಜನ, ಬಾಲಾಜಿ ಸುಧಾಕರ, ರಾಜು ಕಲಾಲ, ಪಂಚಾಯತಿ ಸೆಕ್ರೆಟರಿ ಪರಸಪ್ಪ, ಸುರೇಶ ಕಲಾಲ, ಚಪ್ಪರಬಂದ ಇದ್ದರು.