ರಾಷ್ಟ್ರೀಯ

ದೇಶದಲ್ಲಿ ಕೊರೋನಾ ಸೋಂಕು ಇಳಿಮುಖ - ಚೇತರಿಕೆ ಪ್ರಮಾಣ ಏರುಮುಖ

ದೇಶದಲ್ಲಿ  ಕೊರೋನಾ ಸೋಂಕು ಇಳಿಮುಖ - ಚೇತರಿಕೆ ಪ್ರಮಾಣ ಏರುಮುಖ

ನವದೆಹಲಿ, ಜ 1 : ದೇಶದಲ್ಲಿ  ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರ ಇಳಿಮುಖವಾಗುತ್ತಿದೆ.  ಇದೀಗ ಕಳೆದ 24 ಗಂಟೆಗಳಲ್ಲಿ 20,036 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಅರೋಗ್ಯ ಮತ್ತು  ಕುಟುಂಬ  ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.ಒಂದೇ ದಿನ ದೇಶದಲ್ಲಿ 256 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದು, ಈವರೆಗೆ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ  ಸಂಖ್ಯೆ 1,48,994ಕ್ಕೆ ಏರಿಕೆಯಾಗಿದೆ.ದೇಶದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಶುಕ್ರವಾರ 99 ಲಕ್ಷಕ್ಕೆ  ಕ್ಕೆ ತಲುಪಿದೆ. ಗುಣಮುಖರಾದವರ ಸಂಖ್ಯೆ ಏರಿಕೆಯಾಗಿ ಚೇತರಿಕೆ ಪ್ರಮಾಣ ಶೇ 96 ಕ್ಕೆ ಏರಿಕೆಯಾಗಿದೆ.

ಸದ್ಯ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,54,254ರಷ್ಟಿದೆ. ಇದು ಇದುವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 2.77ರಷ್ಟಿದೆ. ಕಳೆದ 1 ತಿಂಗಳಿನಿಂದ ವರದಿಯಾದ ದೈನಂದಿನ ಪ್ರಕರಣಗಳಿಗಿಂತ ಚೇತರಿಕೆಗೊಂಡ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 23,181 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದೂ  ಇಲಾಖೆ ವರದಿ ಹೇಳಿದೆ. 

ಸುದ್ದಿ ಓದಿ