ತಾಳಿಕೋಟಿ

ಶಿಕ್ಷಕ ವಿಧ್ಯಾಧರ ಯಾತಗಿರಿಗೆ ಸಿಎನ್‌ಆರ್ ರಾವ್ ರಾಷ್ಟ್ರ ಪ್ರಶಸ್ತಿ

ಶಿಕ್ಷಕ ವಿಧ್ಯಾಧರ ಯಾತಗಿರಿಗೆ ಸಿಎನ್‌ಆರ್ ರಾವ್ ರಾಷ್ಟ್ರ ಪ್ರಶಸ್ತಿ

ತಾಳಿಕೋಟೆ 24: ತಾಲೂಕಿನ ಪೀರಾಪೂರ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ವಿಧ್ಯಾಧರ ಯಾತಗಿರಿ ಅವರಿಗೆ 2021 ನೇ ಸಾಲಿನ ರಾಷ್ಟ್ರಮಟ್ಟದ ಸಿಎನ್‌ಆರ್ ರಾವ್ ಓಟ್ ಸ್ಟ್ಯಾಂಡಿಂಗ್ ವಿಜ್ಞಾನ ಶಿಕ್ಷಕ ಪ್ರಶಸ್ತಿ ಲಭಿಸಿದೆ. 

ಶಿಕ್ಷಕ ವಿಧ್ಯಾಧರ ಯಾತಗಿರಿ ಅವರು ತಮ್ಮ 24 ವರ್ಷಗಳ ಸೇವೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರದರ್ಶನದಲ್ಲಿ ಜಿಲ್ಲೆ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಮಾರ್ಗದರ್ಶನ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಯೊಬ್ಬ ಹೊಸ ಇಂಧನಗಳ ಪರಿಚಯದಲ್ಲಿ ಇನ್ಸೆ-್ಪೈರ್ ವಿಜ್ಞಾನ ಪ್ರದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯ, ಜಿಲ್ಲೆ ಹಾಗೂ ಶಾಲೆಗೆ ಕೀರ್ತಿ ತಂದಿರುವದು ವಿಶೇಷ. ಇವರು ವಿಜಯಪುರ ಜಿಲ್ಲೆಯ ಸಂಪನ್ಮೂಲ ವ್ಯಕ್ತಿ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ಮಾರ್ಗದರ್ಶನ ನೀಡಿದ್ದಾರೆ. ಸರಕಾರಿ ಪ್ರೌಢ ಶಾಲೆ ಪೀರಾಪೂರದಲ್ಲಿ ವಿಶೇಷ ಉಪನ್ಯಾಸ, ತಾಲೂಕಿನ ಬೇರೆ ಬೇರೆ ಶಾಲೆಗಳ ನಡುವಿನ ರಶಪ್ರಶ್ನೆ ಸ್ಪರ್ಧೆ ಏರಿ​‍್ಡಸಿದ್ದರು. ಇವರ ಮಾರ್ಗದರ್ಶನದಲ್ಲಿ ಅನೇಕ ವೈಜ್ಞಾನಿಕ ನಾಟಕಗಳು, ವಿಜ್ಞಾನ ಗೋಷ್ಠಿಗಳಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಇವರ ಅನೇಕ ಲೇಖನಗಳು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಮಾಸಿಕ ಪತ್ರಿಕೆ ಬಾಲವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅಲ್ಲದೇ ಇತ್ತಿಜಿಗೆ ಮುಂಕುತಿಮ್ಮನ ಕಗ್ಗಗಳನ್ನು ವೈಜ್ಞಾನಿಕವಾಗಿ ವಿಷ್ಲೇಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳಿಗಾಗಿ ಕೈಕೊಂಡ ಇವರ ಕಾರ್ಯ ಪರಿಗಣಿಸಿ ಆಯ್ಕೆ ಸಮಿತಿ 2021 ಸಾಲಿಗೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜೂ.30 ರಂದು ಬೆಂಗಳೂರಿನ ಜವಾಹರಲಾಲ್ ನೇಹರು ವಿಜ್ಞಾನ ಸಂಧೋಧನಾ ಸಂಸ್ಥೆ ಜಕ್ಕೂರನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ