ಮುಖ್ಯಮಂತ್ರಿ ಬದಲಾವಣೆ ಊಹಾಪೋಹ: ಡಿಸಿಎಂ ಲಕ್ಷ್ಮಣ್ ಸವದಿ
ಅಥಣಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಕೆಲವು ಮಾದ್ಯಮದಲ್ಲಿ ಬರುತ್ತಿದೆ, ನನಗೆ ಯಾವುದೇ ಖಚಿತ ಮಾಹಿತಿಲ್ಲ ಹಾಗೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯಿಲ್ಲ, ಇದು ಊಹಾಪೋಹ ಸುದ್ದಿ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ಅವರು ಅಥಣಿ ಪಟ್ಟಣದಲ್ಲಿ ಮಾದ್ಯಮದವರ ಜೊತೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಯಾಕೆ..!? ಸಮರ್ಥ ಮುಖ್ಯಮಂತ್ರಿ ಇರುವಾಗ ಪದೆಪದೆ ಈ ಪ್ರಶ್ನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಹೈಕಮಾಂಡ್ ಸ್ಪಷ್ಟವಾಗಿ ಅವಧಿ ಮುಗಿಯುವವರೆಗೆ ಬಿ ಎಸ್ ಯಡಿಯೂರಪ್ಪನವರ ಮುಖ್ಯಮಂತ್ರಿಯೆಂದು ಹೇಳಿರುವಾಗ, ಮಾಧ್ಯಮದಲ್ಲೇ ಸಿಎಂ ಬದಲಾವಣೆ ಎಂಬುದು ವರದಿಗಳನ್ನು ಗಮನಿಸುತ್ತಿದ್ದೇನೆ. ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿದರಿಂದ ಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಥಣಿ ತಾಲೂಕಿಗೆ ಎರಡು ಆಕ್ಸಿಜನ್ ಸಂಚಾರಿ ಬಸ್ಗಳನ್ನು ನೀಡಲಾಗುವುದು, ಪಟ್ಟಣದ ಹೊರವಲಯದ ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟಗರ್ೆ ಆಕ್ಸಿಜನ್ ಬೆಡ್ ಆಳವಡಿಸಲಾಗುವುದೆಂದು ಡಿಸಿಎಂ ಸವದಿ ತಿಳಿಸಿದರು