ಕಾರವಾರ

ಪ್ರವಾಹ ಸನ್ನದ್ಧತೆಯ ಸಿಎಂ ವೀಡಿಯೋ ಕಾನ್ಫರೆನ್ಸ್‌

ಪ್ರವಾಹ ಸನ್ನದ್ಧತೆಯ ಸಿಎಂ ವೀಡಿಯೋ ಕಾನ್ಫರೆನ್ಸ್‌

ಕಾರವಾರ 20: ಪ್ರವಾಹ ಸನ್ನದ್ಧತೆಯಕುರಿತು ಮುಖ್ಯಮಂತ್ರಿಗಳು ರಾಜ್ಯದಎಲ್ಲಾಜಿಲ್ಲಾಧಿಕಾರಿಗಳ ಜೊತೆಮಂಗಳವಾರ ವೀಡಿಯೋಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಸಭೆಯಲ್ಲಿಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜಿಲ್ಲೆಯ ಪರಿಸ್ಥಿತಿ ಹಾಗೂ ತೆಗೆದುಕೊಂಡ ಮುಂಜಗೃತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.  

ಮುಂಗಾರು ಹಂಗಾಮಿನ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಜೂನ್13ರಂದುಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿರುತ್ತದೆ. ಜಿಲ್ಲೆಯಲ್ಲಿಒಟ್ಟು 175 ಪ್ರದೇಶಗಳನ್ನು ಪ್ರವಾಹ ಸಂಭವಿಸಬಹುದಾದ ಗ್ರಾಮಗಳಾಗಿ ಗುರುತಿಸಿದ್ದು, 336 ಕಾಳಜೀ ಕೇಂದ್ರಗಳನ್ನು ಗುರುತಿಸಿ ಇಟ್ಟುಕೊಳ್ಳಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಒಟ್ಟು 52720 ಜನರಿಗೆಆಶ್ರಯಕಲ್ಪಿಸಲು ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. 

ಈ ಭಾರಿಯ ಮುಂಗಾರು ಹಾಗೂ ತೌಕ್ತೆಚಂಡಮಾರುತಜಿಲ್ಲೆಯಲ್ಲಿ ಹಲವು ಹಾನಿ ಮಾಡಿದೆ, ಎಪ್ರಿಲ್‌ನಿಂದ ಈ ವರೆಗೆಜಿಲ್ಲೆಯಲ್ಲಿ 5 ಜೀವಹಾನಿಯಾಗಿದ್ದುತಲಾ 5 ಲಕ್ಷ ಪರಿಹಾರಧನ ನೀಡಲಾಗಿದೆ. 110ಮನೆಗಳಿಗೆ ನೀರು ನುಗ್ಗಿ ಬಟ್ಟೆ ಪಾತ್ರೆ ಕಳೆದುಕೊಂಡ ಕುಟುಂಬಗಳಿಗೆ ಒಟ್ಟೂ 4.174 ಲಕ್ಷಪರಿಹರ ನೀಡಲಾಗಿದೆ. ಏಪ್ರಿಲ್‌ನಿಂದ ಈ ವರೆಗೆ 129.36 ಹೆಕ್ಟೇರ್ ಪ್ರದೇಶದಲ್ಲಿಒಟ್ಟೂ24.76 ಲಕ್ಷಮೌಲ್ಯದತೋಟಗಾರಿಕ ಬೆಳೆ ಹಾನಿಯಾಗಿದ್ದು  48.40 ಹೆಕ್ಟೇರ್‌ಪ್ರದೇಶಕ್ಕೆಒಟ್ಟೂ6.10 ಲಕ್ಷ ಪರಿಹಾರ ನೀಡಲಾಗಿದೆ.  ಏಪ್ರಿಲ್‌ನಿಂದ ಈ ವರೆಗೆಜಿಲ್ಲೆಯಲ್ಲಿಒಟ್ಟೂ 492 ಮನೆಗಳು ಹಾನಿಗೊಳಗಾಗಿದ್ದು ಒಟ್ಟೂ 316 ಮನೆಗಳಿಗೆ 45.41 ಲಕ್ಷ ಪರಿಹಾರ ನೀಡಲಾಗಿದ್ದು ಜಿಲ್ಲಾಶಧಿಕಾರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಯಲ್ಲಿಒಟ್ಟೂ 51.07 ಕೋಟಿಅನುದಾನ ಲಭ್ಯವಿದೆಎಂದರು. ಜಿಲ್ಲೆಯಲ್ಲಿಉಂಟಾದ ನಷ್ಟದ ಬಗ್ಗೆ ವಿವರಿಸಿ, 2021ರ ಜೂನ್‌ನಿಂದಜಿಲ್ಲೆಯಲ್ಲಿರಾಜ್ಯ ಹೆದ್ದಾರಿಜಿಲ್ಲಾ, ಮುಖ್ಯ ರಸ್ತೆಗಳು,ಬ್ರಿಡ್ಜ್‌ಗಳು ಸೇರಿದಂತೆಒಟ್ಟೂ8252.40 ಲಕ್ಷ ನಷ್ಟವಾಗಿದೆ. ಜಿಲ್ಲೆಯಲ್ಲಿ ಹೆಸ್ಕಾಂ ಗೆ ಸಂಬಂಧಿಸಿದಂತೆ ಕಂಬಗಳು, ಲೈನ್‌ಗಳು,  ಟಿಸಿಗಳು ಸೇರಿದಂತೆ 130.76 ಲಕ್ಷ ನಷ್ಟವಗಿದೆಎಂದುಜಿಲ್ಲಾಧಿಕಾರಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.  

ಜಿಲ್ಲೆಯಲ್ಲಿ ಪ್ರವಾಹ ಸನ್ನದ್ಧತೆಯ ಮುಂಜಾಗ್ರತಾಕ್ರಮವಾಗಿಮುಂಗಾರು ಹಂಗಾಮಿನಲ್ಲಿರೈತರಿಗೆ ಬಿತ್ತನೆ ಮಾಡಲು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸಲು ಹಾಗೂ ಅತೀವೃಷ್ಟಿಯಿಂದಾಗಿ ಬೆಳೆಗಳ ಹಾನಿಯಾದಲ್ಲಿ ಪರಿಹಾರ ವಿತರಿಸಲು ಸೂಕ್ತ ಕ್ರಮಕೈಗೊಳ್ಳಲು ಕೃಷಿ ಮತ್ತುತೋಟಗಾರಿಕೆಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.  

ಅಧಿಕಾರಿಗಳಿಗೆ  ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲಾ ಪಂಚಾಯತ ರಸ್ತೆಗಳು, ಲೋಕೋಪಯೋಗಿ ಇಲಾಖೆಗಳ ರಸ್ತೆಗಳು, ನಗರ ಪ್ರದೇಶ ವ್ಯಾಪ್ತಿಯಲ್ಲಿನ ರಸ್ತೆಗಳ ಬದಿಯಲ್ಲಿರುವ ಕಚ್ಚಾ ಸಾಮಗ್ರಿಗಳನ್ನು ಹಾಗೂ ರಸ್ತೆಯ ಪಕ್ಕದ ನೀರು ಹರಿದು ಹೋಗುವ ಮಾರ್ಗವನ್ನು ಸ್ವಚ್ಚಗೊಳಿಸಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಮಾಡುವಂತೆ ಹಾಗೂ ಸಮಸ್ಯೆಸ್ಥಳಗಳನ್ನು ಗುರುತಿಸಲು, ಸಹಾಯವಾಣಿ ಸ್ಥಾಪಿಸಲು ಸೂಚನೆ ನೀಡಲಾಗಿರುತ್ತದೆ. ಮೊಬೈಲ್ ನೆಟ್‌ವರ್ಕ ಸಿಗದೇ ಇರುವಂತಹ ಗ್ರಾಮಗಳನ್ನು ನೆಟ್‌ವರ್ಕ್‌ಇರುವ ಹತ್ತಿರದ ಗ್ರಾಮಗಳಿಗೆ  ಪೊಲೀಸ್ ವೈರಲೇಸ್ ಮುಖಾಂತರ ಸಂಪರ್ಕಕಲ್ಪಿಸುವ ವ್ಯವಸ್ಥೆ ಮಾಡಲಾಗಿದ್ದುಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕಾ ಮಟ್ಟದಲ್ಲಿಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿರುತ್ತದೆ. ಸಭೆಯಲ್ಲಿಅಪರಜಿಲ್ಲಾಧಿಕಾರಿಕೃಷ್ಣಮೂರ್ತಿಎಚ್‌.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲಾ ಪಂಚಾಯತ್‌ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾಎಮ್ ಉಪಸ್ಥಿತರಿದ್ದರು. 


ಸುದ್ದಿ ಓದಿ