ಶಿಗ್ಗಾವ್

ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗಣೇಶ್ ಗೌಡರ್‌ಗೆ ಸನ್ಮಾನ

ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗಣೇಶ್ ಗೌಡರ್‌ಗೆ ಸನ್ಮಾನ

ಶಿಗ್ಗಾವಿ 19: ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರ ಕಚೇರಿಯಲ್ಲಿ ಶಿಗ್ಗಾವಿಯ ಅಗ್ನಿಶಾಮಕ ಠಾಣೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗಣೇಶ್ ಎಂ ಗೌಡರ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ಪ್ರಯುಕ್ತ ಅವರನ್ನು ರಾಜ್ಯ ಕಾರ‌್ಯಕಾರಿ ವಿದ್ಯುತ್ತ ಗುತ್ತಿಗೆದಾರ ಸಮಿತಿ ಸದಸ್ಯ ಮಂಜುನಾಥ ಮಣ್ಣಣ್ಣವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

ಮಂಜುನಾಥ ಮಣ್ಣಣ್ಣವರ ಮಾತನಾಡಿ ಅಗ್ನಿಶಾಮಕ ಮತ್ತು ತುರ್ತಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ನಾಗರೀಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ಸಲ್ಲಿಸಿರುವ ಸೇವೆಯು ಶ್ಲಾಘನೀಯ ಮತ್ತು ಯುವ ಅಧಿಕಾರಿಗಳಿಗೆ ಪ್ರೇರಣೆಯಾಗಿದೆ ಅಲ್ಲದೇ ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಾಗೂ ಅಧಿಕಾರಿಗಳ ಹಿಂಬಾಲಕರಿಗೆ ಮಾತ್ರ ಪ್ರಶಸ್ತಿಗಳು ಸೀಮಿತವಾಗಿದ್ದು ಗಣೇಶ ಗೌಡರಿಗೆ ಲಭ್ಯವಾಗಿದ್ದು ಸಂತಸ ತಂದಿದೆ ಮತ್ತು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದರು. 

ನ್ಯಾಯವಾದಿ ಹನುಮಂತ ಬಂಡಿವಡ್ಡರ, ನಾಗಭೂಷಣ ಹಿರೇಮಠ, ಕೆ.ಟಿ.ಪಾಟೀಲ, ನವೀನ ಇಂಗಳಗಿ, ಈರಣ್ಣಾ ಯಲಿಗಾರ,ಅಬ್ದುಲ ಹರಪನಹಳ್ಳಿ, ಮಲ್ಲಪ್ಪ ಹೊನ್ನಳ್ಳಿ, ವೇಂಕಟೇಶ ಬಂಡಿವಡ್ಡರ ಇದ್ದರು. 


ಸುದ್ದಿ ಓದಿ