ಅಥಣಿ

ಸಿಎಂ ಬದಲಾವಣೆ ಚಚರ್ೆ ಹುಟ್ಟುಹಾಕಿದರಿಗೆ ಶೋಭೆ ತರುವುದಿಲ್ಲ: ಡಿಸಿಎಂ ಸವದಿ

ಸಿಎಂ ಬದಲಾವಣೆ ಚಚರ್ೆ ಹುಟ್ಟುಹಾಕಿದರಿಗೆ ಶೋಭೆ ತರುವುದಿಲ್ಲ: ಡಿಸಿಎಂ ಸವದಿ

ಅಥಣಿ: ರಾಜ್ಯದಲ್ಲಿ ಕೊರೋನಾ ದಿಂದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ, ಇದರ ನಡುವೆ ಕೆಲವರು ಸುಮಾಸುಮ್ಮನೆ ಸಿಎಂ ಬದಲಾವಣೆ ಚಚರ್ೆ ಮಾಡುತ್ತಿದ್ದಾರೆ, ಅವರಿಗೆ ಶೋಭೆ ತರುವ ವಿಷಯವಲ್ಲ ಇದು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.ಹಲ್ಯಾಳ ಗ್ರಾಮದಲ್ಲಿ ಅಥಣಿ ತಾಲೂಕಿನ ಪೂರ್ವಭಾಗದ ಕರಿಮಸೂತಿ ಏತ ನೀರಾವರಿ ಕಾಲುವೆಗಳಿಗೆ ಈ ವರ್ಷದ ನೀರು ಹರಿಸುವ ಕಾರ್ಯ ಪ್ರಾರಂಭಿಸಿ ಮಾದ್ಯಮಗಳ ಜೊತೆ ಮಾತನಾಡಿದರು.ರಾಜ್ಯದಲ್ಲಿ ಕೊರೋನಾ ದಿಂದ ದೊಡ್ಡ ಪ್ರಮಾಣದ ಕಷ್ಟದಲ್ಲಿ ಇರುವ ಸಮಯದಲ್ಲಿ, ಜನರ ಆರೋಗ್ಯದ ಕಡೆಗೆ ಸಕರ್ಾರ ಹೆಚ್ಚು ಒತ್ತು ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರು ಸುಮ್ಮನೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸುವುದು ಶೋಭೆ ತರುವ ವಿಚಾರವಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮೊದಲು ಜನರ ಕಷ್ಟಗಳಿಗೆ ನೆರವಾಗಬೇಕು, ಅನಾವಶ್ಯಕ ಚಚರ್ೆ ಬೇಡ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೆಂದು ಮತ್ತೊಮ್ಮೆ ಡಿಸಿಎಂ ಲಕ್ಷ್ಮಣ್ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ಈ ವೇಳೆ ಅಧೀಕ್ಷಕ ಅಭಿಯಂತರ ಬಿ ಆರ ರಾಠೋಡ್, ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಕೆ ರವಿ, ಮುಖಂಡರಾದ ದಿಲೀಪ ಲೋಣಾರೆ, ಶ್ರೀಶೈಲ ನಾಯಿಕ ಸೇರಿದಂತೆ ಇತರರು ಹಾಜರಿದ್ದರು. ತಾಲೂಕಿನ ಪೂರ್ವಭಾಗದ ಕರಿಮಸೂತಿ ಏತ ನೀರಾವರಿ ಕಾಲುವೆಗಳಿಗೆ ಈ ವರ್ಷದ ನೀರು ಹರಿಸುವ ಕಾರ್ಯ ಪ್ರಾರಂಭಿಸಿದ ಡಿಸಿಎಮ್ ಸವ 

ಸುದ್ದಿ ಓದಿ