ಶಿಗ್ಗಾವ್

ಡಿಕೆಸಿಯ ಸಿಎಂ ಕನಸು ಮೂರ್ಖತನದ್ದು: ಸಚಿವ ಪಾಟೀಲ

ಡಿಕೆಸಿಯ ಸಿಎಂ ಕನಸು ಮೂರ್ಖತನದ್ದು: ಸಚಿವ ಪಾಟೀಲ

ಶಿಗ್ಗಾವಿ 27: ಡಿ. ಕೆ ಶಿವಕುಮಾರ ಅವರು ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣ್ತಾ ಇದ್ದಾರೆ, ಇದು ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ ಸಿ ಪಾಟೀಲ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು ಎಂಬ ಡಿಕಿಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೇ ನೀಡಿದ ಅವರು ಜೆಡಿಎಸ್ ಜೊತೆ ಸೇರಿದ್ದಾಗ ಅಧಿಕಾರ ಕಳೆದುಕೊಂಡಿದ್ದಾರೆ,  ಈಗ ಅವರಿಗೆ ಹತಾಶೆ ಮನೋಭಾವ ಬಂದಿದೆ, ಮೀನು ಹೊರಗೆ ಬಿದ್ದಾಗ ಹೇಗೆ ಆಗಿದೆಯೊ ಅದರಂತೆ ಅವರ ಸ್ಥಿತಿ ಆಗಿದೆ, ಸಿಎಂ ಆಗಬೇಕು ಕಾಂಗ್ರೇಸ್ ಸರ್ಕಾರ ತರಬೇಕು ಅಂತಾ ತಿರುಕನ ಕನಸು ಕಾಣ್ತಾ ಇದಾರೆ, ಅದೆಲ್ಲಾ ಆಗೊಲ್ಲಾ ಎಂದು ಲೇವಡಿ ಮಾಡಿದರು.

ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್ ನವರು ಕಮಿಷನ್ ತಗೊಳದ್ರಲ್ಲಿ ಫೇಮಸ್ಸು, ಅದರಲ್ಲಿ ಅವರು ಪರಿಣತರು, ಅವರು ಮಾತಾಡೋಕು ಕಮಿಷನ್ ತಗೊತಾರೆ, ಜನರಿಗೆ ಇದರ ಬಗ್ಗೆ ಸುಮ್ಮನೆ ಸುಳ್ಳು ಹೇಳ್ತಾ ಇದಾರೆ, ಅದೆಲ್ಲಾ ಸುಳ್ಳು, ಜನರು ಬುದ್ದಿ ಕಲಿಸ್ತಾರೆ ಎಂದರು.

ಸಂಗೀತ ನಿರ್ದೇಶಕ ಹಂಸಲೇಖ ವಿಚಾರ ಕುರಿತು ಪ್ರತಿಕ್ರಿಯೇ ನೀಡಿದ ಅವರು ಹಂಸಲೇಖ ಅವರು ಏನ್ ಹೇಳಿದಾರೊ ನನಗೆ ಗೊತ್ತಿಲ್ಲ, ಅವರು ಕ್ಷಮೆ ಕೇಳಿದಾರೆ ಅಂತಾ ತಿಳಿದು ಬಂದಿದೆ, ಕ್ಷಮೆ ಕೇಳಿದ ಮೇಲೆ ಮುಗಿದು ಹೋಗಿದೆ, ಅವರ ಮೇಲೂ ಗೌರವ ಇದೆ, ಶ್ರೀಗಳ ಮೇಲೂ ಗೌರವ ಇದೆ, ಇದೆಲ್ಲಾ ಮುಗಿದು ಹೋದ ಅಧ್ಯಾಯ ಅದನ್ನು ಕೆದಕೋದು ಬೇಡಾ ಎಂದರು.

ರಾಜ್ಯದಲ್ಲಿ ಭ್ರಷ್ಟ ಅಧಿಕಾರಗಳ ಮೇಲೆ ಎಸಿಬಿ ದಾಳಿ ವಿಚಾರವಾಗಿ ಪ್ರತಿಕ್ರಿಯೇ ನೀಡಿ, ಅಧಿಕಾರಿಗಳು ನಮ್ಮ ಸರ್ಕಾರದ ಕಾಲದಲ್ಲಿ ಹುಟ್ಟಿಕೊಂಡಿಲ್ಲಾ, ಎಲ್ಲಾ ಸರ್ಕಾರದ ಸಂದರ್ಭದಲ್ಲೂ ಅಧಿಕಾರಿಗಳು ಇದ್ದಾರೆ, ಅಕ್ರಮವಾಗಿ ಸಂಪಾಧನೆ ಮಾಡಿದ್ದವರ ಮೇಲೆ ಕ್ರಮ ಆಗುತ್ತದೆ, ಯಾರು ತಪ್ಪು ಮಾಡಿದ್ದಾರೊ ಅವರಿಗೆ ಶಿಕ್ಷೆ ಆಗುತ್ತದೆ ಎಂದರು.

ಸುದ್ದಿ ಓದಿ