ರೈತರಿಗೆ ಎರೆಹುಳು ತೊಟ್ಟಿ ಉಪಯುಕ್ತತೆ ತಿಳಿಸಿಕೊಟ್ಟ ಬೈರೇಗೌಡ

ರೈತರಿಗೆ ಎರೆಹುಳು ತೊಟ್ಟಿ ಉಪಯುಕ್ತತೆ ತಿಳಿಸಿಕೊಟ್ಟ ಬೈರೇಗೌಡ

ಬಳ್ಳಾರಿ 22: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಕೊಳಗಲ್, ಬಾದನಹಟ್ಟಿ, ಹಂದಿಹಾಳ್, ಗುಡದೂರು,ಕೊರ್ಲಗುಂದಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಮತ್ತು ಇನ್ನೀತರ ಕೆಲಸಗಳನ್ನು ಗುರುವಾರ ವೀಕ್ಷಿಸಿದರು.

 ಮೊದಲಿಗೆ ಬಳ್ಳಾರಿ ಸಮೀಪದ ಕೊಳಗಲ್ಲು ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು ನರೇಗಾ ಅಡಿ ಸಾಮಾಜಿಕ ಅರಣ್ಯದ ವತಿಯಿಂದ ಕೈಗೊಳ್ಳಲಾಗಿರುವ ರೈಲ್ವೆ ಗೇಟ್ ಹತ್ತಿರದ ಗಿಡ ನೆಡುವ ಕಾಮಗಾರಿ, ರಸ್ತೆ ಬದಿ ನೆಡುತೋಪು ಮತ್ತು ಕೊಳಗಲ್ಲುವಿನಲ್ಲಿ ನಿಮರ್ಿಸಲಾಗಿರುವ 35 ಎರೆಹುಳು ತೊಟ್ಟಿಗಳನ್ನು ವೀಕ್ಷಿಸಿದ ಸಚಿವರು ಈ ತೊಟ್ಟಿಗಳ ಉಪಯುಕ್ತತೆ ಕುರಿತಂತೆ ರೈತರೊಂದಿಗೆ ಕೆಲಹೊತ್ತು ಸಂವಾದ ನಡೆಸಿದರು. ರೈತರು ಎರೆಹುಳು ತೊಟ್ಟಿಯಿಂದಾಗಿ 1ಎಕರೆಗೆ 7ಸಾವಿರ ರೂಪಾಯಿ ಮತ್ತು ಸಮಯವು ಉಳಿತಾಯವಾಗಿದೆ. ನಮಗೆ ಬಹಳಷ್ಟು ಅನುಕೂಲವಾಗಿದೆ ಎಂದು ರೈತರು ಸಚಿವರಿಗೆ ಹೇಳಿದರು.

 ನಂತರ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವೀಕ್ಷಿಸಿದರು.ನಂತರ ಬಾದನಹಟ್ಟಿ ಗ್ರಾಮಕ್ಕೆ ತೆರಳಿ ಅಲ್ಲಿಯೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

  ಈ ಸಂದರ್ಭದಲ್ಲಿ ಸಚಿವರೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿದರ್ೇಶಕ ಕೆಂಪೇಗೌಡ, ಸಚಿವರ ಆಪ್ತ ಕಾರ್ಯದಶರ್ಿ ವೆಂಕಟೇಶ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಜಿಪಂ ಅಭಿವೃದ್ಧಿ ಉಪಕಾರ್ಯದಶರ್ಿ ಮುಕ್ಕಣ್ಣ ಕರಿಗಾರ್,ತಾಪಂ ಇಒ ಜಾನಕಿರಾಮ್, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಸುದ್ದಿ ಓದಿ