ಶಿಗ್ಗಾವ್

ಗೋ ಮೂತ್ರ ಸೇವನೆಯಿಂದ ಮನುಷ್ಯ ರೋಗ ಮುಕ್ತ ಜೀವನ: ಮಹೇಶ

ಗೋ ಮೂತ್ರ ಸೇವನೆಯಿಂದ ಮನುಷ್ಯ ರೋಗ ಮುಕ್ತ ಜೀವನ: ಮಹೇಶ

ಶಿಗ್ಗಾವಿ 24: ಗೋ ಮೂತ್ರ ಸೇವನೆಯಿಂದ ಮನುಷ್ಯ ರೋಗ ಮುಕ್ತ ಜೀವನವನ್ನು ನಡೆಸಬಹುದಾಗಿದೆ. ಅಂತಹ ಅದ್ಭುತ ಶಕ್ತಿ ಗೋ ಮೂತ್ರದಲ್ಲಿ ಅಡಗಿದೆ ಎಂಬುದನ್ನು ಪಾಶ್ಚಾತ್ಯ ವಿಜ್ಞಾನ ಸಾಭಿತು ಪಡೆಸಿದೆ ಎಂದು ಕಲಬುರ್ಗಿ ಮಾಧವ ಗೋ ಶಾಲೆಯ ಮಹೇಶ ಬಿದರಕರ್ ಹೇಳಿದರು. 

ಬಿಸನಳ್ಳಿ ಗ್ರಾಮದ ಜ.ಪಂ.ವೇ.ಆ.ಸಂ.ಸಂ.ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಇಷ್ಠಲಿಂಗ ಮಹಾಪೂಜೆಯ 3 ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ಋಷಿಮುನಿಗಳು ಗೋಮೂತ್ರೇ ಧನವಂತರಿ ಎಂದು ಹೇಳಿಕೋಂಡುಬರುತ್ತಿರುವುದು ರೂಡಿಗತವಾಗಿ ಮುಂದುವರೆದುಕೋಂಡು ಬರುತ್ತಿದೆ. ಮನುಷ್ಯನ ಗಂಭೀರ ಖಾಯಿಲೆಯಾದ ಕ್ಯಾನ್ಸರ್‌ರೋಗಕ್ಕೆ ಗೋ ಮೂತ್ರ ಧಿವ್ಯ ಓಷಧಿಯಾಗಿದೆ. ನೀವು ಪ್ರತಿನಿತ್ಯ ಬಳಸುವ ಪಾಕೀಟ್ ಹಾಲೂಕೂಡಾ ಹಾಲಾಹಲವಾಗಿದ್ದು, ದೇಶಿ ಹಸುವಿನ ಹಾಲನ್ನು ಉಪಯೋಗಿಸುವ ಮೂಲಕ ಆರೋಗ್ಯಯುತ ಜೀವನವನ್ನು ನಡೆಸಬಹುದಾಗಿದೆ ಎಂದು ಹೇಳಿದರು. 

 ಡಾ.ಎ.ಸಿ.ವಾಲಿ ಮಾತನಾಡಿ ಪಂಚಪೀಠಗಳ ಅನೇಕ ಶಾಸನಗಳು ನಮಗೆ ಲಭ್ಯಇವೆ. ಅದರ ಪ್ರಕಾರ ಚಂಗಿಲ ಮಂಟಪದಲಿ, ಅಣ್ಣ ಬಸವಣ್ಣನವರ ಅನುಭವ ಮಂಟಪದಲಿ ನಡೆದಂತ ಕಾರ್ಯಕಲಾಪಗಳು ಚಂಗಿಲ ಮಂಟಪದಲ್ಲಿ ನಡೆಯುತ್ತಿದ್ದವು ಎಂದು ಶಾಸನಗಳಿಂದ ತಿಳಿದುಬರುತ್ತಲಿದೆ. ಅಣ್ಣ ಬಸವಣ್ಣನವರ ಕೈಂಕರ್ಯಕ್ಕೆ 10 ಸಾವಿರ ಚರಜಂಗಮರನ್ನು ನೀಡಿದ ಕೀರ್ತಿ ಶ್ರೀ ರೇವಣಸಿದ್ಧರಿಗೆ ಸಲ್ಲುತ್ತದೆ. ಮುಸ್ಲೀಂ ದೊರೆಗಳೂ ಕೂಡಾ ಶ್ರೀ ಕಾಶಿ ಪೀಠದ ಅನುಯಾಯಿಗಳು ಆಗಿದ್ದು, 192 ಎಕರೆ ಜಮೀನನ್ನು ಶ್ರೀ ಕಾಶಿ ಪೀಠಕ್ಕೆ ನೀಡಿದ ಕುರುಹುಗಳು ಲಭ್ಯವಿವೆ. ಇದು ಮುಸ್ಲೀಂ ರಾಜರುಗಳು ಶ್ರೀ ಕಾಶಿ ಪೀಠದ ಮೇಲಿರುವ ಅಭಿಮಾನವನ್ನು ಎತ್ತಿತೋರಿಸುತ್ತದೆ. ಹಾಗಾಗಿ ಪಂಚ ಪೀಠಗಳು ವೀರ ಶೈವ ಲಿಂಗಾಯತರಿಗೆ ಮಾತ್ರ ಗುರುಗಳಾಗಿರದೇ ವಿಶ್ವದ ಸರ್ವ ದರ್ಮಿಯರಿಗೂ ಗುರುಗಳಾಗಿದ್ದಾರೆ ಎಂಬುದು ತಿಳಿದುಬರುತ್ತದೆ ಎಂದು ಹೇಳಿದರು. 

ಶ್ರೀ ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಧಿವ್ಯ ಸಾನಿಧ್ಯವಹಸಿ ಆಶೀರ್ವಚನ ನೀಡಿದರು. ಗುಳೇದಗುಡ್ಡದ ಶ್ರೀ ಡಾ.ನೀಲಕಂಠ ಶಿವಾಚಾರ್ಯರು ಪ್ರಾಸ್ತಾವಿಕ ನುಡಿನಮನ ಸಲ್ಲಿಸಿದರು. ಶಿಗ್ಗಾವಿ ಶ್ರೀ ಸಂಗನಬಸವ ಸ್ವಾಮಿಗಳು, ಸಹಾಯಕ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು. ಪಂಪನಗೌಡ ಪಾಟೀಲ ರವರಿಗೆ ಸಹಕಾರಿ ಸುಧಾಕರ ಎಂಬ ಪ್ರಶಸ್ತಿ ಪ್ರಧಾನಮಾಡಲಾಯಿತು. 

ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿರೇಶ ಆಜೂರ, ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣವರ, ಗದಿಗಯ್ಯ ಸದಾಶಿವಪೇಟಿಮಠ, ಶಿವಣ್ಣ ಬಿಳೆಕುದರಿ ಸೇರಿದಂತೆ ಇತರರು ಇದ್ದರು. ಸಾಗರ ಕುರವತ್ತಿಮಠ ಮಲ್ಲಿಕಾರ್ಜುನ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ಹಾಗು ಸಿದ್ದಲಿಂಗೇಶ ಹಿರೇಮಠ ನಿರೂಪಿಸಿದರು. 


ಸುದ್ದಿ ಓದಿ