ಮಿಂಚಿನ ಓಟದ ದೊರೆ ಮಿಲ್ಖಾಸಿಂಗ್ ಜೊತೆ ಉದ್ಯಮಿ ಶಶಿಧರ
ಶಿಗ್ಗಾವಿ 21: ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಶಶಿಧರ ಯಲಿಗಾರ ಒಂದು ವರ್ಷದ ಹಿಂದೆ ವ್ಯವಹಾರ ನಿಮಿತ್ಯ ವಿಮಾನ ಮುಖಾಂತರ ಪಂಜಾಬ ಮಾರ್ಗವಾಗಿ ದೆಹಲಿ ಪ್ರಯಾಣ ಮಾಡುತ್ತಿರುವಾಗ ಪದ್ಮಶ್ರೀ ಪುರಸ್ಕೃತ ಮಿಂಚಿನ ಓಟದ ದೊರೆ ಮಿಲ್ಖಾಸಿಂಗ್ ಜೊತೆ ಸುಮಾರು 20 ನಿಮಿಷಗಳ ಕಾಲ ಉದ್ಯಮಿ ಶಶೀಧರ ಯಲಿಗಾರ ತಮ್ಮ ವೈಯಕ್ತಿಕ ವಿಷಯಗಳನ್ನು ವಿನಿಮಯ ಮಾಡಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಖ್ಯಾತ ಅಥ್ಲೆಟಿನ ದ್ರುವತಾರೆ ಮಿಲ್ಕಾಸಿಂಗ ಅವರ ಮರಣದ ವಿಷಯವನ್ನು ಕೇಳಿ ಕೆಲವು ನಿಮಿಷ ಭಾವುಕರಾಗಿದ್ದರು ಏಕೆಂದರೆ ಮಿಲ್ಖಾಸಿಂಗ್ ಅವರ ಜೊತೆ 20 ನಿಮಿಷಗಳ ಕಾಲ ವಿಷಯಗಳನ್ನು ವಿನಿಮಯ ಮಾಡಿದಾಗ ಅವರ ಅನ್ಯೋನ್ಯತೆ ಹಾಗೂ ಅವರು ಹಂಚಿಕೊಂಡ ವಿಷಯವು ನನಗೆ ಇಂದು ಪ್ರೇರಣೆಯಾಗಿದೆ ನಂತರ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿ ಅವರ ಕುಟುಂಬ ವರ್ಗಕ್ಕೆ ಆ ದುಖ:ವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಹಾರೈಸಿದರು.