ರಾಣೆಬೆನ್ನೂರ

ಕಟ್ಟಡ ಕಾರ್ಮಿಕರ ಸಾಹಸದ ಕಾರ್ಯ ಶ್ಲಾಘನೀಯ: ಸಂಕನೂರ

ಕಟ್ಟಡ ಕಾರ್ಮಿಕರ ಸಾಹಸದ ಕಾರ್ಯ ಶ್ಲಾಘನೀಯ: ಸಂಕನೂರ

ರಾಣೆಬೆನ್ನೂರು16:  ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರ, ಕುಶಲಕರ್ಮಿಗಳ ಪಾತ್ರ ಪ್ರಶಂಶನೀಯ. ಪುಟ್ಟ ಮನೆಯೇ ಇರಲಿ, ಭವ್ಯ ಭಂಗಲೋಗಳೇ ಆಗಲಿ, ಗಾಳಿ ಮಳೆ ಎನ್ನದೆ, ಚಳಿ  ಬಿಸಿಲು ಲೆಕ್ಕಿಸದೆ ದೇಹ ದಂಡಿಸಿ, ಬೆವರು ಸುರಿಸಿ ಶ್ರಮಿಸುವ ಶ್ರಮಿಕರ ಕಥೆ ಅವುಗಳ ಹಿಂದೆ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅಭಿಪ್ರಾಯಪಟ್ಟರು. ಸ್ಥಳೀಯ ಕೆ.ಹೆಚ್.ಬಿ. ಕಾಲೋನಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಆರ್. ಎಸ್. ಪಾಟೀಲರವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕುಶಲಕರ್ಮಿಗಳಿಗೆ ಸನ್ಮಾನಿಸಿ ಮಾತನಾಡಿದರು.ಕಲ್ಲು ಮಣ್ಣು ಸಾಗಿಸುವಾಗ, ಇಟ್ಟಿಗೆ ಎತ್ತುವಾಗ, ಗಾರೆ ಕೆಲಸದಲ್ಲಿ ತೊಡಗಿಕೊಂಡಾಗ, ಲೋಹ ಬೆಸುಗೆ ಹಚ್ಚುವಾಗ, ಜೀವದ ಹಂಗು ತೊರೆದು ನಿಲ್ಲುವ ಕಾರ್ಮಿಕರ ಸಾಹಸ ಮೆಚ್ಚುವಂತಹುದು ಎಂದರು. ಇಂಜೀನಿಯರ್ ಎಮ್.ಹೆಚ್‍ಇಚ್ಚಂಗಿ, ಕಾರ್ಮಿಕ ನಾಗರಾಜ ಪಾಟೀಲ್, ಪರಶುರಾಮ, ಶಂಕ್ರು, ಮಂಜಣ್ಣ, ರವಿ, ಚಂದ್ರು, ಸಿದ್ದಣ್ಣ, ಮೆಹಬೂಬ್ ಎಸ್.ಸಿ.ಕೋರಿ,ಸುಭಾಷ್ ಪಾಟೀಲ್ ಇವರುಗಳನ್ನು ಖಾದಿಮಾಲೆ, ಖಾದಿ ಟೋಪಿ, ಕರಿಬೇವಿನ ಸಸಿ ನೀಡಿ ಸತ್ಕರಿಸಲಾಯಿತು. ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕುಶಲಕರ್ಮಿಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್‍ವಿ ಸಂಕನೂರ ಸನ್ಮಾನಿಸಿದರು.

ಸುದ್ದಿ ಓದಿ