ತಾಳಿಕೋಟಿ

ಆಶ್ರಯ ಮನೆಗಳ ನಿರ್ಮಾಣ ಮಾಡಿ ಹಸ್ತಾಂತರ ಮಾಡಿ

ಆಶ್ರಯ ಮನೆಗಳ ನಿರ್ಮಾಣ ಮಾಡಿ ಹಸ್ತಾಂತರ ಮಾಡಿ

ತಾಳಿಕೋಟೆ05: ಪಟ್ಟಣದ ಪುರಸಭೆ ವತಿಯಿಂದ ಜಿ ಪ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಿ ಕೊಡುವದಾಗಿ ಹಣ ತುಂಬಿಸಿಕೊಂಡು 5 ವರ್ಷ ಕಳೆದರೂ ಸಹಿತ ಮನೆಗಳ ನಿರ್ಮಾಣ ಮಾಡಿಲ್ಲ. ಕೂಡಲೇ ಮನೆಗಳ ನಿರ್ಮಾಣ ಮಾಡಿ, ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. 

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕತ್ರಿ ಬಜಾರ, ಎಂ.ಜಿ.ರಸ್ತೆ, ಶಿವಾಜಿ ವೃತ್ತ ಬಸ್ ನಿಲ್ದಾಣದ ಮೂಲಕ ಹಾಯ್ದು ತಹಶೀಲ್ದಾರ ಕಚೇರಿಗೆ ಆಗಮಿಸಿತು. 

 ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ಜಿ ಪ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಿ ಕೊಡುವದಾಗಿ 2017 ರಲ್ಲಿ ಸಾಮಾನ್ಯ ವರ್ಗದವರಿಂದ 50 ಸಾವಿರ ಮತ್ತು ಪರಿಶಿಷ್ಟ ವರ್ಗದವರಿಂದ 30 ಸಾವಿರ ಹಣವನ್ನು ತುಂಬಿಸಿಕೊಳ್ಳಲಾಗಿದೆ. ಸುಮಾರು 600 ಮನೆಗಳ ನಿರ್ಮಾಣ ಮಾಡಿ ಕೊಡುವದಾಗಿ ತಿಳಿಸಲಾಗಿತ್ತು. 5 ವರ್ಷ ಕಳೆದರು ಸಹಿತ ಯಾವುದೇ ಸುಳಿವು ಇಲ್ಲ. ಫಲನುಭವಿಗಳು ಬಡ್ಡಿಯಲ್ಲಿ ದುಡ್ಡು ತಂದು ಹಣ ತುಂಬಲಾಗಿದೆ. ಇತ್ತ ಮನೆಯೂ ಇಲ್ಲ. ಮನೆ ಬಾಡಿಗೆ ಹಾಗೂ ಬಡ್ಡಿ ದುಡ್ಡು ತುಂಬುವದು ಕಷ್ಠವಾಗಿದೆ. ಪುರಸಭೆ ಅಧಿಕಾರಿಗಳು ಕೇಳಿದರೆ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ಮನೆಗಳ ನಿರ್ಮಾಣ ಎನ್ನುವದು ಗೊಂದಲದ ಗೂಡಾಗಿದೆ. 15 ದಿನಗಳೊಳಗೆ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಬೇಕು. ಇಲ್ಲಿದ್ದರೆ ತಾಳಿಕೋಟೆ ಬಂದ್ ಮಾಡಿದ ರೈತ ಸಂಘದ ನೇತೃತ್ವದಲ್ಲಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವದು ಎಂದರು. 

ಮನವಿ ಸ್ವಿಕರಿಸಿ ಮಾತನಾಡಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಮನೆಗಳ ನಿರ್ಮಾಣಕ್ಕೆ ಟಂಡರ್ ಕರೆದು ಕಾಮಗಾರಿ ಆರಂಭ ಮಾಡುವ ಸಮಯದಲ್ಲಿ ಗುತ್ತಿಗೆದಾರ ನಿಧನ ಹೊಂದಿದ ಹಿನ್ನಲೆಯಲ್ಲಿ ಕಾಮಗಾರಿ ಆರಂಭವಾಗಲಿಲ್ಲ. ಮತ್ತೆ ಟೆಂಡರ್ ಮಾಡುವ ಕಾರ್ಯ ಸರಕಾರದ ಹಂತದಲ್ಲಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದರು. 

ಈ ಸಂದರ್ಬದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ರಾಣುಕಾ ಮನ್ಸೂರ, ಸಾಮಾಜಿಕ ಕಾರ್ಯಕರ್ತ ನದಿಂ ಕಡು, ಜಿಲ್ಲಾಧ್ಯಕ್ಷ ವಿಜಯ ಪೂಜಾರಿ, ಯಾದಗಿರಿ ಜಿಲ್ಲಾಧ್ಯಕ್ಷ ಹನೀಫಸಾಬ ಹತ್ತಿಕುಣೆ, ತಾಲೂಕಾಧ್ಯಕ್ಷ ಭೀಮಣ್ಣ ಆಯ್ಕೋಡಿ ಅಯ್ಯಣ್ಣ ಬಿದರಕುಂದಿ, ರಿಯಾಜ್ ಬಡಗಣ, ವಾಯ್‌.ಎಲ್‌.ಬಿರಾದಾರ, ಫಲಾನುಭವಿಗಳಾದ ಅಸ್ಪಾಕ ಕೆಂಬಾವಿ, ಖಾಜಾಬಿ ಮನಗೂಳಿ, ದಿಶಾದ ಅವಟಿ, ಮಾಲನಬಿ ನಾಡಗೌಡ, ಪರ್ವಿನ ಬೇಪಾರಿ, ಫಾತಿಮಾ ಸಾಸಾಬಾಳ, ಶಾರದಾ ಬಿಜಾಪೂರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ