ಯರಗಟ್ಟಿ

ಬ್ರಿಗೇಡ್‌ನಿಂದ ಮೋದಿ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯ: ಸೂಲಿಬೆಲೆ

ಬ್ರಿಗೇಡ್‌ನಿಂದ ಮೋದಿ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯ: ಸೂಲಿಬೆಲೆ

ಯರಗಟ್ಟಿ 04: 'ನಮೋ ಬ್ರಿಗೇಡ್'2.0 ಜನ ಗಣ ಮನ ಬೆಸೆಯೋಣ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತ ಮೂಲಕ ಬೈಕ್ ರಾ​‍್ಯಲಿಯು ಗಾಂಧಿ ರ್ಸಕಲ್ ಮೂಲಕ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಪಟ್ಟಣದ ಎಂ. ಜಿ. ರಸ್ತಯಲ್ಲಿರುವ ಭಗವಾಧ ಚೌಕನಲ್ಲಿ ಆಮಿಸಿತು.    

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಕುರ್ಚಿಮೇಲೆ ಕೂರಿಸುವುದೇ ಬ್ರಿಗೇಡ್ ಮುಖ್ಯ ಉದ್ದೇಶ ಹಾಗೂ ಲೋಕಸಭೆ ಚುನಾವಣೆ ಘೋಷಣೆ ಆಗುವವರೆಗೆ ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಬ್ರಿಗೇಡ್ ಮಾಡಲಿದೆ.  

ಆ ಮೂಲಕ ಮೋದಿ ಅವರಿಗೆ ಸದೃಢ ದೇಶ ನಿರ್ಮಾಣಕ್ಕಾಗಿ ಬೆಂಬಲ ನೀಡಲಿದೆ. ಮೂರನೇ ಭಾರಿಗೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಮಾಡುವುದೇ ಈ ನಮೋ ಬ್ರಿಗೇಡ್ 2.0 ಜನ ಗಣ ಮನ ಬೆಸೆಯೋಣ ಬೈಕ್ ರಾ​‍್ಯಲಿ ಉದ್ದೇಶ.  

ಮೋದಿಯವರನ್ನು ಸೋಲಿಸಲೆಂದು ಜಗತ್ತಿ ಅನೇಕ ದುಷ್ಟ ಶಕ್ತಿಗಳು ಹಾತೊರೆಯುತ್ತಿವೆ ಪಾಕಿಸ್ತಾನ, ಚೀನಾ, ಕೆನಡಾಗಳು ಹಿಂದೆ ಬಿದ್ದಿವೆ. ಭಯೋತ್ಪಾದಕರು, ನಕ್ಸಲರು, ಅವರ ಸೋಲು ಕಾಣಲು ಹಾತೊರೆಯುತ್ತಿದ್ದಾರೆ. ಖೋಟಾನೋಟಿನ, ಡ್ರಗ್ಗಿನ, ಓಷಧ ಮಾಫಿಯಾಗಳ ಮಂದಿ ಮೋದಿಯನ್ನು ಸೋಲಿಸಲು ಇದು ಕೊನೆಯ ಹೋರಾಟವೆಂದು ನಿಶ್ಚಿಯಿಸಿಬಿಟ್ಟಿದ್ದಾರೆ ಎಂದು ಹೇಳಿದರು.  

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ ಎಂದು ಆರೋಪಿದರು. ಜಲಾಶಯದ ಭಾಗದಲ್ಲಿ ರೈತರು ಬೆಳೆದಿರುವ 1.50 ಲಕ್ಷ ಹೇಕ್ಟರ್ ಪ್ರದೇಶಕ್ಕೆ ನೀರು ಬಿಡದೆ ರೈತರಿಗೆ ಮೊಸ ಮಾಡಿದ್ದಾರೆ ಎಂದು ದೂರಿದರು. ಸಿಎಂ ಅವರು ರೈತರ ಪರವಾದ ಒಂದು ಯೋಜನೆ ಕೈಗೊಂಡಿಲ್ಲ. ಯುವಕರಿಗೆ ಉದ್ಯೋಗ ನೀಡಿಲ್ಲ, ರೈತರ ಜಮೀನುಗಳಿಗೆ ನೀರು ಹರಿಸಿಲ್ಲ. ಕಾರ್ಮಿಕರಿಗೆ ಅನುಕೂಲವಾಗುಂತಹ ಉದ್ಯೋಗ ಸೃಷ್ಟಿಸಿಲ್ಲ ಹಾಗೂ ರಾಜ್ಯದ ಕಾವೇರಿ ನೀರನ್ನು ಕದ್ದುಮುಚ್ಚಿ ತಮಿಳುನಾಡಿಗೆ ಹರಿಸಿ ರಾಜ್ಯದ ಜನತೆಗೆ ಮೋಸಮಾಡಿದ ರಾಜ್ಯ ಸರ್ಕಾರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯದಿಂದ ಅಭಿವೃದ್ಧಿ ಮರೆತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. 

ಈ ವೇಳೆ ಮುತ್ತು ದೇವರಡ್ಡಿ, ಕುಮಾರ ಜಕಾತಿ, ಕೃಷ್ಣಮೂರ್ತಿ ತೋರಗಲ್ಲ, ವಿನಯ ಇಟ್ನಾಳ, ವಿನಾಯಕ ಕೊಪ್ಪದ, ಚೇತನ ಜಕಾತಿ, ಕುಮಾರ ಹಿರೇಮಠ, ಸಂತೋಷ ವಾಲಿ, ಆನಂದ ನಾಯ್ಕ, ಗೋವಿಂದ ಪೂಜೇರ, ಶಿವನಾಯ್ಕ ಬೂದಿಗೊಪ್ಪ, ಮಹಾದೇವ ಮುರಗೋಡ, ಕಿರಣ ಹುಣಶ್ಯಾಳ, ಹೇಮಂತ ಹೊಂಗಲ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ