ಲಾರಿ ಚಾಲಕರಿಗೆ ಉಪಹಾರ ವ್ಯವಸ್ಥೆ
ಶಿಗ್ಗಾವಿ 14: ತಾಲೂಕಿನ ತಡಸ ಕ್ರಾಸ್ನ ಎನ್ಎಚ್ 4ದಲ್ಲಿ ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅದ್ಯಕ್ಷ ಬಾಬರ ಬೋವಾಜಿ ಇವರ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು ರವಾನಿಸುತ್ತಿರುವ ಲಾರಿ ಚಾಲಕರಿಗೆ ಉಪಹಾರ ಮತ್ತು ನೀರನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ “ಹಸಿದವರಿಗೆ ಅನ,್ನ ನೀರನ್ನು ಲಾರಿ ಚಾಲಕರಿಗೆ ಹಾಗೂ ಹೆದ್ದಾರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಪೋಲಿಸ ಇಲಾಖೆಯವರಿಗೆ ನೀಡಲಾಯಿತು.
ವಿತರಣಾ ಕಾರ್ಯಕ್ರಮದಲ್ಲಿ ಗದಗ ಶಾಸಕ ಎಚ್ ಕೆ ಪಾಟೀಲ, ಮಾಜಿ ಸಂಸದ ಪ್ರೋ. ಐ ಜಿ ಸನದಿ, ಮಾಜಿ ಶಾಸಕ ಡಿ ಆರ್ ಪಾಟೀಲ, ಎಐಸಿಸಿ ಕಾರ್ಯದರ್ಶಿ ಶಾಕೀರ್ ಸನದಿ, ಮಾಜಿ ವಿದಾನ ಪರಿಷತ್ ಸದಸ್ಯ ಸೋಮಣ್ಣಾ ಬೇವಿನಮರದ, ಯುನಸ್ ಖಾನ್, ತಮೀದ ಖಾಜಿ, ಶಿವಾನಂದ ಬಾಗೂರ ಶಿವಾನಂದ ಬೆಂತೂರ, ಪ್ರಕಾಶ ಹಾದಿಮನಿ, ಮಂಜುನಾಥ ಮಣ್ಣಣ್ಣವರ, ಕೇದಾರ್ಪ ಬಗಾಡೆ, ಫಯಾಜ್ ಸವಣೂರ ಸೇರಿದಂತೆ ಇನ್ನೂ ಹಲವು ಕಾಂಗ್ರೇಸ್ ಮುಂಖಡರ ಭಾಗವಹಿಸಿದ್ದರು.