ತಾಳಿಕೋಟಿ

ಬಾಂದಾರ ನೀರಿನಲ್ಲಿ ಮುಳಗಿ ಬಾಲಕ ಸಾವು

ಬಾಂದಾರ ನೀರಿನಲ್ಲಿ ಮುಳಗಿ ಬಾಲಕ ಸಾವು

ತಾಳಿಕೋಟೆ 25: ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬಾಂದಾರ ನೀರಿನಲ್ಲಿ ಬಾಲಕ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಕೊಡಗಾನೂರ ಗ್ರಾಮದ ಶಮೀರ ಬಾಬು ದೊಡಮನಿ(14) ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಅದೇ ಗ್ರಾಮದ ಮಲ್ಲಾರಾವ ಕುಲಕರ್ಣಿ ಅವರ ಹೊಲದ ಬಳಿ ನಿರ್ಮಿಸಲಾದ ಬಾಂದಾರ ಬಳಿ ತನ್ನ ಇಬ್ಬರು ಸ್ನೇಹಿತರ ಜೊತೆ ಹೋದಾಗ  ನೀರಿನಲ್ಲಿ ಆಕಸ್ಮೀಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.  ಬುಧವಾರ ಬೆಳಿಗ್ಗೆ ಹುಡುಕಾಟ ನಡೆಸಿದ್ದಾಗ ಬಾಂದಾರ ನೀರಿನಲ್ಲಿ ಶವವಾಗಿ ಸಿಕ್ಕಿದ್ದಾನೆ. ಬಾಲಕನ ತಂದೆ ಬಾಬು ನೀಡಿದ ದೂರಿನನ್ವಯ ತಾಳಿಕೋಟೆ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್‍ರು ತನಿಖೆಯನ್ನು ಕೈಕೊಂಡಿದ್ದಾರೆ.

ಸುದ್ದಿ ಓದಿ