ಬ್ಯಾಡ್ಗಿ

ಕೈ ಟಿಕೆಟಗಾಗಿ ಅಸಮಾದಾನ : ಎಸ್ ಆರ್ ಪಾಟೀಲ

ಕೈ ಟಿಕೆಟಗಾಗಿ ಅಸಮಾದಾನ : ಎಸ್ ಆರ್ ಪಾಟೀಲ


ಲೋಕದರ್ಶನ ವರದಿ 

ಬ್ಯಾಡಗಿ 01: ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ, ಸ್ಥಳೀಯ ಅಭ್ಯರ್ಥಿಯಾಗಿರುವ ನನ್ನನ್ನು ಹೊರತುಪಡಿಸಿ ಟಿಕೆಟ್ ಕೇಳುವ ನೈತಿಕತೆ ಯಾರಿಗೂ ಇಲ್ಲ, ಕಳೆದ ಸೋಲಿನ ಅನುಕಂಪದ ಲಾಭ ಪಡೆದು ಗೆಲ್ಲುವ ಸಂದರ್ಭದಲ್ಲಿ ಯಾವ ಮಾನದಂಡ ಇಟ್ಟುಕೊಂಡು ಬೇರೊಬ್ಬರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಇಲ್ಲದಿದ್ದರೇ ನನ್ನ ನಿರ್ಧಾರವೇ ಬೇರೆಯಾಗಿರುತ್ತೆ ಎಂದು ಎಸ್‌.ಆರ್‌.ಪಾಟೀಲ ಎಚ್ಚರಿಸಿದರು. 


         ಪಟ್ಟಣದಲ್ಲಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಎಂದ ಮೇಲೆ ಆಕಾಂಕ್ಷಿಗಳಿರುವುದು ಸಹಜ, ಟಿಕೆಟ್ ನೀಡುವಂತೆ 8 ಜನ ಅಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಸ್ಕ್ರೀನಿಂಗ್ ಸಮಿತಿಯಲ್ಲಿ ಇಬ್ಬರು ಹೆಸರು ಅಂತಿಮಗೊಂಡಿತ್ತು, ಆದರೆ ಆಕಾಂಕ್ಷಿಗಳ ಜೊತೆ ಯಾವುದೇ ಚರ್ಚಿಸದೇ ನಿರ್ಧರಿಸಿರುವುದು ಅಸಮಾಧಾನ ಮೂಡಿಸಿದೆ ಎಂದರು 

. 

 ಸಾಮಾನ್ಯ ಕ್ಷೇತ್ರವಾದ ಬಳಿಕ ಕೇವಲ 40 ಸಾವಿರ ಇದ್ದಂತಹ ಮತದಾರರ ಸಂಖ್ಯೆಯನ್ನು ಕಳೆದ ಚುನಾವಣೆಯಲ್ಲಿ 70 ಸಾವಿರಕ್ಕೆ ಹೆಚ್ಚಿಸಿದ್ದೇನೆ, ಇದೀಗ 1 ಲಕ್ಷಕ್ಕೂ ಅಧಿಕವಾಗಿದೆ, ಒಂದು ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಜನರಿರಲಿಲ್ಲ, ಮಾಜಿ ಶಾಸಕರು ಕೋವಿಡ ಸಮಯದಲ್ಲಿ ಎಲ್ಲಿ ಹೋಗಿದ್ದರು, ನಾಲ್ಕೂವರೆ ವರ್ಷ ಮನೆ ಬಾಡಿಗೆ ಕೊಟ್ಟು ನಾಪತ್ತೆಯಾಗಿದ್ದ ಅವರು ಟಿಕೆಟ್ ಘೋಷಣೆ ಬಳಿಕವಷ್ಟೇ ಚುನಾವಣೆ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದರು. 


   ಹೈಕಮಾಂಡ್ ಸೂಚನೆ ನೀಡಿತ್ತು: ನಾನೇ ಅಭ್ಯರ್ಥಿ ಎಂದು ಕೆಪಿಸಿಸಿ ಹೈಕಮಾಂಡ್ (ಡಿಕೆಶಿ) ತಿಳಿಸಿದ್ದರೂ ಆದಾಗ್ಯೂ ಟಿಕೆಟ್ ಘೋಷಣೆ ವೇಳೆ ಬದಲಾಗಿದೆ, ಕಳೆದ ಬಾರಿ ಕಾಂಗ್ರೆಸ್ ಪಕ್ಷ ಸೋಲಲು ಇದೀಗ ಟಿಕೆಟ್ ಪಡೆದವರೇ ಕಾರಣ,  ಇದ ರ ಬಗ್ಗೆ ಸಾಕ್ಷಿ ಪುರಾವೆಗಳಿವೆ ಪಕ್ಷದ ಮುಖಂಡರಿಂದ ಅನ್ಯಾಯವಾಗಿದೆ, ಸ್ಥಳೀಯ ಅಭ್ಯರ್ಥಿಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡುತ್ತೇನೆ ಎಂದರು. 


 ಈಗಲೂ ಕಾಲಮಿಂಚಿಲ್ಲ: ಮುಖಂಡ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಇದೀಗ ಟಿಕೆಟ್ ಹಂಚಿಕೆಯನ್ನು ನೋಡಿದರೆ ಪಕ್ಷಕ್ಕೆ ನಿಷ್ಟೆಯಾಗಿರುವ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲವೆನ್ನುವಂತಾಗಿದೆ, ಕಳೆದ ಬಾರಿ ಸೋತಿರುವುದು ಒಂದು ಕಾರಣ ಬಿಟ್ಟರೇ, ಬ್ಯಾಡಗಿ ಮತಕ್ಷೇತ್ರದಲ್ಲಿ ಎಸ್‌.ಆರ್‌.ಪಾಟೀಲ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದನ್ನು ನಿಲ್ಲಿಸಿರಲಿಲ್ಲ, ಕಳೆದ 4 ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಪಾಟೀಲರಿಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಆಗ್ರಹಿಸಿದರು. 


ಜಿಲ್ಲೆಯಲ್ಲಿ ಕಾಂಗ್ರೆಸ್ ದಿವಾಳಿಯಾಗುತ್ತಿದೆ: ನ್ಯಾಯವಾದಿ ಶಿವಪ್ಪ ಅಂಬಲಿ ಮಾತನಾಡಿ, ಟಿಕೆಟ್ ನೀಡುವುದರ ಜೊತೆಗೆ ಪಕ್ಷದಲ್ಲಿ ಆಗಿರುವ ಭಿನ್ನಮತವನ್ನೂ ಕೂಡ ಸರಿಪಡಿಸುವುದು ಪಕ್ಷದ ಹೈಕಮಾಂಡ್ ಜವಾಬ್ದಾರಿ, ಮೊದಲ ಪಟ್ಟಿ ಬಿಡು ಗಡೆ ಬಳಿಕ ಶಿಗ್ಗಾವಿ ಹೊರತಪಡಿಸಿ ಹಾನಗಲ್ಲ, ರಾಣೆಬೆನ್ನೂರ, ಹಾವೇರಿ, ಬ್ಯಾಡಗಿ ಹಿರೇಕೆರೂರ ಗಳಲ್ಲಿ ಭಿನ್ನಮತ ಭುಗಿಲೆದ್ದಿದೆ, ಈಗಲೂ ಕೂಡ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ, ಇದೀಗ ಉದ್ಭವಿಸಿರುವ ಭಿನ್ನಮತವನ್ನು ಶಮನಗೊಳಿಸಿದಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯ ಕೂಡಲೇ ಹೈ ಕಮಾಂಡ್ ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಮತ್ತೊಮ್ಮ ಪರೀಶೀಲಿಸುವಂತೆ ಆಗ್ರಹಿಸಿದರು.  

 ಈ ವೇಳೆ ಮುಖಂಡರಾದ ಶಂಕ್ರಗೌಡ ಪಾಟೀಲ, ಮಹೇಶ್ ಉಜನಿ, ಮಂಜುನಾಥ ಬೋವಿ, ಈಶ್ವರ ಮಠದ, ಮಹಬೂಬ್‌ಲಿ ತೋಟಪ್ಪ ಅಕ್ಕಿ, ಮಹಾಂತೇಶ ಉಪ್ಪಾರ, ರಮೇಶ ಮೋಟೆಬೆನ್ನೂರ ಸೇರಿದಂತೆ ಇನ್ನಿತರರಿದ್ದರು. 


ಸುದ್ದಿ ಓದಿ