ಬೊಮ್ಮಾಯಿಯವರ ಹುಟ್ಟು ಹಬ್ಬ ಪಕ್ಷಾತೀತ, ಧರ್ಮಾತೀತ ಕಾರ್ಯಕ್ರಮ
ಶಿಗ್ಗಾವಿ 24: ಬೊಮ್ಮಾಯಿಯವರ ಹುಟ್ಟು ಹಬ್ಬ ಪಕ್ಷಾತೀತ, ಧರ್ಮಾತೀತ ಕಾರ್ಯಕ್ರಮ ಆಗಬೇಕು ಎಂಬ ದೃಷ್ಟಿಯಿಂದ ಕ್ಷೇತ್ರದ ಮುಖಂಡರ ಆಶಯದಂತೆ ಹುಟ್ಟು ಹಬ್ಬ ಆಚರಣೆಗೆ ಮುಂದಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ಬೊಮ್ಮಾಯಿ ನಿವಾಸದಲ್ಲಿ ಬೊಮ್ಮಾಯಿ ಅಭಿಮಾನಿ ಬಳಗ ಏರಿ್ಡಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರಕ್ಕೆ ಹಲವಾರು ಮಹನೀಯರ ಕೊಡುಗೆ ಬಹಳಷ್ಡಿದೆ, ಹುಟ್ಟು ಹಬ್ಬಗಳು ಅರ್ಥಪೂರ್ಣವಾಗಬೇಕು, ರೈತರಿಗೆ, ವಿದ್ಯಾರ್ಥಿಗಳಿಗೆ ಹಲವಾರು ಜನರಿಗೆ ನೆರವಾಗಬೇಕು ಉದ್ಯೋಗದ ವಲಯದಲ್ಲಿ ಸಾಧನೆ ಮಾಡಲಾಗಿದೆ, ಎಲ್ಲ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಿದ್ದೇವೆ, 26-28 ರಂದು ನಡೆಯುವ ಕಾರ್ಯಕ್ರಮ ದಲ್ಲಿ ತಾಲೂಕಿನ 24 ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ, ಸ್ಪೂರ್ತಿದಾಯಕ ಉಪನ್ಯಾಸವನ್ನು ಐ.ಎ.ಎಸ್ ಅಧಿಕಾರಿ ಭಂಡಾರಿಮಠ ನೇರವೇರಿಸುವರು. ವಿವಿಧ ದೇವಸ್ಥಾನ, ಸಾರ್ವಜನಿಕ ಅಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಶ್ರೇಷ್ಟ ಕನ್ನಡಿಗ ಪ್ರಶಸ್ತಿಯನ್ನ ಇಸ್ರೋ ವಿಜ್ಞಾನಿ ಸೋಮನಾಥ, ಕೆ.ಎಲ್.ಇ ಸಂಸ್ಥೆ ಅಧ್ಯಕ್ಷ ಡಾ.ಪ್ರಬಾಕರ ಕೋರೆ, ಹೃದಯ ರೋಗ ತಜ್ಙ ಡಾ. ವಿವೇಕ ಜವಳಿ, ಡಾ. ವಸಂತ ಅಳ್ವಾ ಅವರಿಗೆ ನೀಡಲಾಗುತ್ತಿದೆ, ಸ್ಥಳೀಯವಾಗಿಯೂ ಹಲವಾರು ಸಾಧಕ ಮುಖಂಡರನ್ನ ಗೌರವಿಸಲಾಗುತ್ತಿದೆ, ಆಳ್ವಾಸ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ರಾಜ್ಯದ ಆಡಳಿತದಲ್ಲಿ ಶಿಗ್ಗಾವಿ ತಾಲೂಕನ್ನ ಮಾದರಿ ಮಾಡಿದ ಶ್ರೇಯಸ್ಸು ಬೊಮ್ಮಾಯಿಯವರಿಗೆ ಸಲ್ಲುತ್ತದೆ, ರೈತರ ನಾಡಿ ಮಿಡಿತ ಅರಿತ ಬೊಮ್ಮಾಯಿಯವರು ರೈತ ಖಾಳಜಿ ಹಾಗೂ ರೈತ ಪರ ಯೋಜನೆಗಳು, ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಮಹಿಳೆಯರಿಗೆ ಹಲವಾರು ಯೊಜನೆಗಳನ್ನ ತಂದು ಅಭಿವೃದ್ದಿಗೆ ಬದ್ದವಾಗಿದ್ದಾರೆ, 28 ರಂದು ಮದ್ಯಾಹ್ನ 12 ಘಂಟೆಗೆ ಸವಣೂರಿನಲ್ಲಿ ನಂತರ ಸಂಜೆ 4 ಘಂಟೆಗೆ ಶಿಗ್ಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.
ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ ಮಾತನಾಡಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ಅಂಗವಾಗಿ ಬೊಮ್ಮಾಯಿಯವರ ಕ್ಷೇತ್ರಕ್ಕೆ ಬಂದು ನೀಡಿದ ಅಭೂತಪೂರ್ವ ಅಭಿವೃದ್ದಿ ಆಡಳಿತದ ಹಿನ್ನೆಲೆಯಲ್ಲಿ 16 ಬಡ ವಿದ್ಯಾರ್ಥಿಗಳನ್ನ ಶಾಲೆ ದತ್ತು ಪಡೆದು ಉಚಿತ ಶಿಕ್ಷಣ ನೀಡುವ ಮೂಲಕ ಮೃತ್ಯುಂಜಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪೀನೀಕ್ಸ್ ಶಾಲೆ ಮಹತ್ವದ ಮೈಲುಗಲ್ಲು ಇಡಲು ಆಡಳಿತ ಮಂಡಳಿ ಬದ್ದವಾಗಿದೆ ಎಂದರು.
ಡಾ.ಶೋಭಾ ನಿಸ್ಸೀಮಗೌಡ್ರ, ವೆಂಕೋಜಿ, ಗಂಗಾಧರ ಬಾಣದ, ನವೀನ ಸವಣೂರ ಮಾತನಾಡಿದರು. ದೇವಣ್ಣ ಚಾಕಲಬ್ಬಿ, ವೀರೆಶ ಆಜೂರ, ಶಿವಪ್ರಸಾದ್ ಸುರಗೀಮಠ, ವೀರನಗೌಡ್ರ ಪಾಟೀಲ, ಗಂಗಣ್ಣಾ ಸಾತಣ್ಣವರ, ಸೇರಿದಂತೆ ಬೊಮ್ಮಾಯಿ ಅಭಿಮಾನಿ ಬಳಗದ ವಿವಿಧ ಮುಖಂಡರು ಇದ್ದರು. ಪರುಶರಾಮ ಸೊನ್ನದ ಸ್ವಾಗತಿಸಿದರು, ಮುಂಜುನಾಥ ಬ್ಯಾಹಟ್ಟಿ ವಂದಿಸಿದರು.