ಕೋವಿಡ್ ವಾರಿಯರ್ಸ್ ಕಾರ್ಯ ಶ್ಲಾಘನೀಯ
ಶಿಗ್ಗಾವಿ 04: ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯು ಜಿಲ್ಲಾ ಆಸ್ಪತ್ರೆಯ ನಂತರ ಅತೀ ಹೆಚ್ಚು ಕೋವಿಡ್ ರೋಗಿಗಳನ್ನು ಚಿಕಿತ್ಸೆ ಮಾಡುತ್ತಿದೆ ಇದಕ್ಕೆ ವೈದ್ಯರು, ಸಹಾಯಕರು, ನರ್ಸಗಳು, ಟೆಕ್ನಿಷಿಯನ್ಗಳು, ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಕಾರ್ಯ ಸಾಂದರ್ಭಿಕವಾಗಿ ಶ್ಲಾಘನೀಯ ಕಾರ್ಯವಾಗಿದೆ ಅವರಿಗೆ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ಬಂದಾಗ ವೆಂಟಿಲೇಟರ್ಸಗಳನ್ನ ಹೆಚ್ಚಿಸಲು ತಿಳಿಸಿದ್ದೆ ಮೊದಲು 24 ವೆಂಟಿಲೇಟರ್ ಇದ್ದವು ಈಗ ಮತ್ತೆ 8 ವೆಂಟಲೇಟರ್ ಹೆಚ್ಚಿಗೆ ಮಾಡಲಾಗಿದೆ, ಶಿಗ್ಗಾವಿಯಲ್ಲಿ ಒಂದು ವೆಂಟಿಲೇಟರ್ ಕಾರ್ಯನಿರ್ವಹಿಸುತ್ತಿದೆ ಇನ್ನೊಂದಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ, ಈಗಾಗಲೇ ಶಿಗ್ಗಾವಿ ಆಸ್ಪತ್ರೆಯಲ್ಲಿ 35 ಆಕ್ಸಿಜನ್ ಕಾನ್ಸಂಟ್ರೇಟರ್ ಇವೆ, ಇನ್ನೂ ಹತ್ತು ಆಕ್ಸಿಜನ ಕಾನ್ಸಂಟ್ರೇಟರ್ಗಳನ್ನ ಕೊಡುತ್ತಿದ್ದೇವೆ, ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 30 ಮಕ್ಕಳಿಗೆ ವಿಶೇಷ ಆಕ್ಸಿಜನ್ ಬೆಡ್ಡಿನ ವ್ಯವಸ್ಥೆಯನ್ನು ಕಾದಿರಿಸಲಾಗಿದ್ದು ಅಲ್ಲಿ ಐಸಿಯು ಸೌಲಭ್ಯವನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಾಡದಲ್ಲಿ 20, ನಮ್ಮ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿ 45, ಬಂಕಾಪೂರದಲ್ಲಿ 10, ಸವಣೂರನಲ್ಲಿ 10 ಆಕ್ಸಿಜನ್ ಕಾನ್ಸ್ಂಟ್ರೇಟರ್ ವ್ಯವಸ್ಥೆಯನ್ನು ಮಾಡಲಾಗಿದೆ, ಶಿಗ್ಗಾವಿಯಲ್ಲಿ 69 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಇನ್ನೂ 60 ಆಕ್ಸಿಜನ್ ಇರುವ ಬೆಡ್ಗಳು ಲಭ್ಯ ಇವೆ, ಶಿಗ್ಗಾವಿಯಲ್ಲಿ 6.3, ಸವಣೂರಿನಲ್ಲಿ 0.28 ಪಾಸಿಟಿವಿಟಿ ರೇಟ್ ಇದ್ದು ಅಂದರೆ ನೂರು ಜನರನ್ನು ಪರೀಕ್ಷೆ ಮಾಡಿದರೆ 7 ಜನರಿಗೆ ಪಾಸಿಟಿವ್ ಬರುತ್ತಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ನಮಗೆ ಮುಖ್ಯವಾಗಿ ಚಾಲೆಂಜ್ ಇರೋದು ಬ್ಲಾಕ್ ಫಂಗಸ್ ರೋಗವಾಗಿದ್ದು ಈ ಸೋಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಓಷಧ ನೀಡುವಂತೆ ಕೇಂದ್ರ ರಾಸಾಯನಿಕ ಸಚಿವ ಡಿ. ವಿ ಸದಾನಂದ ಗೌಡರಿಗೆ ಮನವಿ ಮಾಡಿದ್ದೇನೆ ಹಾವೇರಿ ಜಿಲ್ಲೆಗೆ ಹೆಚ್ಚಿನ ಪ್ರಮಾಣದ ಓಷಧಿಯನ್ನು ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.
ಜಿಲ್ಲೆಯ ಪ್ರತಿ ಎಲ್ಲ ತಾಲೂಕಾ ಮತ್ತು ಜಿಲ್ಲಾಸ್ಪತ್ರೆಗೆ ಒಂದು ಸಾವಿರ ಲೀಟರ್ ಪರ್ ಮಿನಟ್ ಜೊತೆಗೆ ತಾಲೂಕಾ ಮತ್ತು ಜಿಲ್ಲಾಸ್ಪತ್ರೆಗಳಿಗೆ ಆಕ್ಸಿಜನ್ ಜನರೇಟರ್ ಅನ್ನು ಬರುವ ಎರಡು ಮೂರು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು,
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪೋಲಿಸ್ ವಸತಿ ಸಂಕೀರ್ಣಗಳನ್ನು ಕಟ್ಟಬೇಕೆಂದು ತೀರ್ಮಾನ ಮಾಡಿ ಅನುಮೋದನೆ ಮಾಡಲಾಗಿದೆ ಜೊತೆಗೆ ಜಿಲ್ಲಾ ಕೇಂದ್ರದಲ್ಲಿಯೂ ಕ್ರಮ ಜರುಗಿಸಲಾಗಿದೆ, ಸವಣೂರ ಕೆಎಸ್ಆರ್ಪಿ ಬಟಾಲಿಯನ್ನಲ್ಲಿಯೂ 7 ಕೋಟಿಗಳಲ್ಲಿ ಅನುಧಾನವನ್ನ ಬಿಡುಗಡೆ ಮಾಡಿದ್ದೇನೆ, ಶಿಗ್ಗಾವಿ ಪೋಲೀಸ್ ಸಂಕೀರ್ಣವನ್ನ ಆಧುನೀಕರಣ ಮಾಡಲು ಹಣ ಬಿಡುಗಡೆ ಮಾಡಿದ್ದೇನೆ, ಕೆಎಸ್ಆರ್ಟಿಸಿ ಅಭಿವೃದ್ದಿ, ಶಿಗ್ಗಾವಿ ಹಳೆ ಬಸ್ ನಿಲ್ದಾಣದ ಅಭಿವೃದ್ದಿ ಕ್ರಮ ಜರುಗಿಸಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಎಲ್ಲ ಮಾದರಿಯ ರಕ್ತ ಪರೀಕ್ಷೆ ಸೌಲಭ್ಯವಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತೆರೆಯಲಾಗುತ್ತಿದ್ದು ಅದಕ್ಕೆ ನಮ್ಮ ತಾಲೂಕಿನಲ್ಲಿ ಹುಲಗೂರನ್ನು ಆಯ್ಕೆ ಮಾಡಿ ಕಳಿಸಿದ್ದೇನೆ ಜೊತೆಗೆ 4 ಕೋಟಿ ರೂಗಳ ಅನುಧಾನದ ಅನುಮೋದನೆಗೆ ಕಳಿಸಲಾಗಿದೆ.
ಬಸವರಾಜ ಬೊಮ್ಮಾಯಿ
ಗೃಹ ಸಚಿವ