ತಾಳಿಕೋಟಿ

ಮೋದಿಯವರ ಹುಟ್ಟು ಹಬ್ಬ: ರಕ್ತದಾನ ಶಿಬಿರ

ಮೋದಿಯವರ ಹುಟ್ಟು ಹಬ್ಬ: ರಕ್ತದಾನ ಶಿಬಿರ

ತಾಳಿಕೋಟೆ: ರಾಷ್ಟ್ರವನ್ನು ಸುರಕ್ಷಿತ, ಸಮೃದ್ಧ ಮತ್ತು ಘನತೆಯ ರಾಷ್ಟ್ರವನ್ನಾಗಿ ಮಾರಿ​‍್ಡಸುವಲ್ಲಿ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷವಾದ ಗೌರವ ಲಭಿಸಲು ಕಾರಣರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಹೇಳಿದರು. 

ತಾಲೂಕಿನ ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಅಂಗವಾಗಿ ದೇವರ ಹಿಪ್ಪರಗಿ ಮಂಡಲ ಯುವ ಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರರವನ್ನು ಉದ್ಘಾಟಿಸಿ ಮಾತನಾಡಿದರು. 

ದೇಶವನ್ನು ಜಗತ್ತಿನ ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬ ಬಡವನಿಗೂ ಸಹ ಅತ್ಯುತ್ತಮ ಚಿಕಿತ್ಸೆ ನೀಡಲು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು ಕೋಟ್ಯಾಂಟತರ ಬಡವರು ಅದರಿಂದ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಸರ್ಥ ನಾಯಕತ್ವ ಹಾಗೂ ದೂರದೃಷ್ಠಿಯಿಂದ ಭಾರತ ದೇಶ ಜಗತ್ತಿನ ಶ್ರೇಷ್ಠ ದೇಶಗಳ ಸಾಲಿನಲ್ಲಿ ಅಗ್ರಗಣ್ಯವಾಗಿದೆ. ಮೋದಿಯವರ ಹುಟ್ಟುಹಬ್ಬವನ್ನು ಜನಸ್ನೇಹಿಯಾಗಿಸುವ ಮೂಲಕ ಸಮಾಜದ ಜೊತೆ ಪಕ್ಷದ ಕಾರ್ಯಕರ್ತರು ಇದ್ದಾರೆ ಎನ್ನುವದನ್ನು ತೋರಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತದ ಕೊರತೆಯಿಂದ ಹಲವರು ಸಾವನ್ನಪ್ಪುತ್ತಿದ್ದಾರೆ. ಯುವ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ ಎಂದರು. 

ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಮೋದಿಯವರ ದೇಶವನ್ನು ಮಾದರಿ ದೇಶವನ್ನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬನಿಗೂ ಶುದ್ದ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಲಜೀವನ ಮೀಷನ್ ಯೋಜನೆ, ರೈತನ ಸಹಾಯಕ್ಕಾಗಿ ಫಸಲ್ ವಿಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು  ಸರಕಾರ ಜಾರಿಗೆ ತಂದು ಬಡವರ ಪಾಲಿಗೆ ಬೆಳಕಾಗಿದ್ದು ಕಾರ್ಯಕರ್ತರು ಪ್ರತಿ ಮನೆ ಮನೆಗೂ ತೆರಳಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ತಲುಪಿಸುವ ಕಾರ್ಯ ಮಾಡಬೇಕು ಎಂದರು. 

ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಸಿದ್ದು ಬುಳ್ಳಾ, ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರೆಡ್ಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ, ಗುರಣ್ಣಗೌಡ ಗುರಡ್ಡಿ, ಸಂಗನಗೌಡ ಹೆಗರೆಡ್ಡಿ, ಸದಾನಂದ ಅಂಗಡಿ, ಸೋಮು ದೇವೂರ, ಭೀಮನಗೌಡ ಲಚ್ಯಾಣ, ಪ್ರಶಾಂತ ಹಾವರಗಿ, ರಾಜುಸಾಹುಕಾರ ಇಬ್ರಾಹಿಂಪೂರ, ಬಸನಗೌಡ ಪಾಟೀಲ ಲಕ್ಕುಂಡಿ, ಶಂಕ್ರಗೌಡ ದೇಸಾಯಿ, ಮುತ್ತು ದೇಸಾಯಿ, ಮುತ್ತುಗೌಡ ಮಾಳಿ ಸಿದ್ದನಗೌಡ ಕಾರಗನೂರ, ಮಲ್ಲನಗೌಡ ಬಿರಾದಾರ, ಶರಣಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ