ತಾಳಿಕೋಟಿ

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚೋರಗಸ್ತಿಗೆ ಸನ್ಮಾನ

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚೋರಗಸ್ತಿಗೆ ಸನ್ಮಾನ

ತಾಳಿಕೋಟಿ 29:  ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕರಾದ ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬಸಾಬ ಚೋರಗಸ್ತಿ ಇವರನ್ನು ಬ್ಲಾಕ್ ಕಾಂಗ್ರೆಸ್ ಸಮೀತಿ ವತಿಯಿಂದ ಸನ್ಮಾನಿಸಲಾಯಿತು. 

ಪಟ್ಟಣದ ಈದ್ಗಾ ಶಾದಿ ಹಾಲನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಅಧ್ಯಕ್ಷ ಮಹಿಬೂಬಸಾಬ ಚೋರಗಸ್ತಿ ಇವರನ್ನು ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಪದಾಧಿಕಾರಿಗಳು ಸನ್ಮಾನಿಸಿದರು.  

ಸನ್ಮಾನ ಸ್ವಿಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮಹೆಬೂಬ ಚೋರಗಸ್ತಿಯವರು ಪಕ್ಷದ ವರಿಷ್ಟರು ನನ್ನ ಮೇಲೆ ವಿಸ್ವಾಸವಿರಿಸಿ ಈ ಮಹತ್ತರ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ನನಗೆ ನಿಮ್ಮೇಲ್ಲರ ಸಹಕಾರದ ಅಗತ್ಯ ಇದೆ. ಬರಲಿರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿಯಾಗಿರಲಿ ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಿ ಕೆಲಸ ಮಾಡೋಣ ಎಂದರು.  

ಈ ಸಂಧರ್ಭದಲ್ಲಿ ಮುಸ್ಲಿಮ ಧರ್ಮಗುರು ಸೈಯದಶಕೀಲ್ ಅಹ್ಮದ ಖಾಜಿ ಮುಖಂಡರಾದ ಸಿದ್ದನಗೌಡ ಪಾಟೀಲ, ಬಿ ಎಸ್ ಗಬಸಾವಳಗಿ, ಎಮ್‌.ಜಿ ಪಾಟೀಲ, ಎಸ್ ಬಿ ಕಟ್ಟಿಮನಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶಟ್ಟಿ, ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಗನಿಸಾಬ ಲಾಹೋರಿ, ಬಿ. ಎನ್‌. ಹಿಪ್ಪರಗಿ, ಸಂಗನಗೌಡ ಅಸ್ಕಿ, ಎ. ಡಿ.ಎಕೀನ್, ಹಸನಸಾ ಮನಗೂಳಿ, ಸಂಗನಗೌಡ ನಾಡಗೌಡ, ಗೋಪಾಲ ವಿಜಾಪೂರ, ಎಂ. ಎ. ಮೇತ್ರಿ, ಮಂಜೂರಲಿ ಬೇಪಾರಿ, ರಜಾಕ್ ಮಮದಾಪೂರ, ಫಯಾಜ ಉತ್ನಾಳ, ಮಶಾಕ ಚೋರಗಸ್ತಿ, ಅಬ್ಬಾಸ ನಿಡಗುಂದಿ, ಸದ್ದಾಮ್ ಹೊನ್ನಟಗಿ, ಮೈನುಇ ಬೇಪಾರಿ, ಹುಸೇನ ಜಮಾದಾರ, ಉಪಸ್ಥಿರಿದ್ದರು. 


ಸುದ್ದಿ ಓದಿ