ಶಿಗ್ಗಾವ್

ಪಾಟೀಲ ಪುಟ್ಟಪ್ಪನವರ ಜನ್ಮದಿನಾಚರಣೆ

ಪಾಟೀಲ ಪುಟ್ಟಪ್ಪನವರ ಜನ್ಮದಿನಾಚರಣೆ

ಲೋಕದರ್ಶನ ವರದಿ 

ಶಿಗ್ಗಾವಿ 16:  ವೈಚಾರಿಕ ನೆಲೆಗಟ್ಟಿನ ಸಮಾಜದ ಪರಿಕಲ್ಪನೆ ಮೂಡಿಸಿದವರು ಪಾಟೀಲ ಪುಟ್ಟಪ್ಪನವರಾಗಿದ್ದು ಸಾಹಿತಿಗಳಾಗಿ, ಕನ್ನಡಪರ ಹೋರಾಟಗಾರರಾಗಿ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಕನ್ನಡ ಹೋರಾಟದಲ್ಲಿ ಪಾಟೀಲ ಪುಟ್ಟಪ್ಪನವರು ಮುಂಚೂಣಿಯಲ್ಲಿದ್ದವರು ಎಂದು ಕ.ಸಾ.ಪ ತಾಲೂಕಾಧ್ಯಕ್ಷ ಎಸ್ ಎನ್ ಮುಗಳಿ ಹೇಳಿದರು. 

ಪಟ್ಟಣದ ವಿರಕ್ತಮಠದಲ್ಲಿ ಕಸಾಪ ತಲೂಕಾ ಘಟಕದ ವತಿಯಿಂದ ನಡೆದ  ಪಾಟೀಲ ಪುಟ್ಟಪ್ಪನವರ ಜನ್ಮದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವಿರಕ್ತಮಠದ ಸಂಗನಬಸವಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬ ಫ ಯಲಿಗಾರ ಡಾ. ನಾಗರಾಜ ದ್ಯಾಮನಕೊಪ್ಪ, ಪ್ರಕಾಶ ಹಾದಿಮನಿ, ರಮಜಾನ್ ಕಿಲ್ಲೇದಾರ, ಜಯಣ್ಣ ಹೆಸರೂರ, ನಂದಾ ಗಾಂಜಿ, ಅಕ್ಕಮ್ಮ ಅಂಕಲಕೋಟಿ, ಎಂ ಆರ್ ಚೂರಿ, ಭರಮಜ್ಜ ನವಲಗುಂದ, ವೀರಣ್ಣ ಬಡ್ಡಿ, ಶಂಕರಗೌಡ ಪಾಟೀಲ, ಶರೀಫ ಮಾಕಪ್ಪನವರ, ಶಿವಶಂಕರ ಅಕ್ಕಿ, ಶಿವಾನಂದ ಬಾಗೂರ ಮುಂತಾದವರು ಇದ್ದರು, ಕಸಾಪ ಕಾರ್ಯದರ್ಶಿ ಎಸ್ ಕೆ ಹೂಗಾರ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ