ಯರಗಟ್ಟಿ

ವಿಜೃಂಭಣೆಯಿಂದ ಬೀರೇಶ್ವರ,ಮಾಳಿಂಗರಾಯನ ಜಾತ್ರೆ

ವಿಜೃಂಭಣೆಯಿಂದ ಬೀರೇಶ್ವರ,ಮಾಳಿಂಗರಾಯನ ಜಾತ್ರೆ

ಯರಗಟ್ಟಿ: ತಾಲೂಕಿನ ಸುಕ್ಷೇತ್ರ ಮುಗಳಿಹಾಳ ಗ್ರಾಮದ  ಬೀರೇಶ್ವರ ಮತ್ತು ಮಾಳಿಂಗರಾಯನ ಜಾತ್ರಾ ಮಹೋತ್ಸವ ಬುಧವಾರ ದಿ.22 ರಂದು ಸಂಭ್ರಮದಿಂದ ಜರುಗಿತು. 

ಮುಂಜಾನೆ 10ಘಂಟೆಗೆ ಡೊಳ್ಳು ಕಟ್ಟುವುದು. ಹಿರಿವೊಳಿಯಿಂದ ನೀರು ತರುವುದು. ಬಿಜಾಪೂರದಿಂದ ಹೂ ಮಾಲೆ ಬಂದ ನಂತರ ಮುಗಳಿಹಾಳ ಗ್ರಾಮದ ವಿಠ್ಠಲ ದೇವರ ಸುಕ್ಷೇತ್ರದಿಂದ ಹಾಲು ಮತ್ತು ಅಂಬಲಿ ಬಿಂದಿಗಳು, ಆರತಿಗಳನ್ನು ಸುಮಂಗಲೆಯರಿಂದ ವಿವಿಧ ವಾಧ್ಯ ಮೇಳದೊಂದಿಗೆ ಬೀರೇಶ್ವರ ಹಾಗೂ ಮಾಳಿಂಗರಾಯನ ಕ್ಷೇತ್ರಕ್ಕೆ ಬಂದು ಪೂಜೆಗೆ ಅರ್ಪಿಸಿದರು. ಮಧ್ಯಾಹ್ನ 12-30ಕ್ಕೆ ದೇವಋಷಿ ಲಕ್ಷ್ಮಣ ಅಜ್ಜನವರು ಮಾಳಿಂಗರಾಯ ಗುಡಿಯವರೆಗೆ ಅಲಗ ಆಡುವುದರ ಮೂಲಕ ಸಾವಿರಾರು ಭಕ್ತರು ಪರಸ್ಪರ ಭಂಡಾರ ಎರಚುತ್ತಾ ಸಂಭ್ರಮಿಸಿದರು. 


ಸುದ್ದಿ ಓದಿ