ಕಾರವಾರ

ಬನವಾಸಿ ಠಾಣೆ ಪಿಎಸ್‍ಐ ಆಗಿ ಬಿರಾದರ

ಬನವಾಸಿ ಠಾಣೆ ಪಿಎಸ್‍ಐ ಆಗಿ ಬಿರಾದರ

ಬನವಾಸಿ 04: ಬನವಾಸಿ ಪೋಲಿಸ್ ಠಾಣೆಯ ಪಿಎಸ್‍ಐ ಆಗಿ ಹನುಮಂತ ಬಿರಾದರ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಪಿಎಸ್‍ಐ ಆಗಿ ಕಾರ್ಯ ನಿರ್ವಹಿಸಿದ್ದ ಮಹಾಂತೇಶ ನಾಯಕ್ ಅವರು ಹೊನ್ನಾವರ ಪೋಲಿಸ್ ಠಾಣೆಗೆ  ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಹನುಮಂತ ಬಿರಾದರ ಬನವಾಸಿ ಪೋಲಿಸ್ ಠಾಣೆಯ ಪಿಎಸ್‍ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

2016ರಲ್ಲಿ ಇಲಾಖೆಗೆ ಸೇರಿದ್ದ ಬಿರಾದರ ಈ ಹಿಂದೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾಗಿದ್ದಾರೆ.

ಸುದ್ದಿ ಓದಿ