ಶಿಗ್ಗಾವ್

ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ

ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ

ಶಿಗ್ಗಾವಿ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಚೆನ್ನಮ್ಮನ ವೃತ್ತದಿಂದ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡ ರಾ​‍್ಯಲಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬೈಕ ರಾ​‍್ಯಲಿ ಸವಾರಿ ಮಾಡಿ ಘೋಷಣೆ ಕೂಗುತ್ತಾ ಚಾಲನೆ ನೀಡಿದರು.  

ಸುಮಾರು ಐದು ನೂರು ಬೈಕುಗಳು ರಾ​‍್ಯಲಿಯಲ್ಲಿ ಭಾಗವಹಿಸಿದ್ದು ರಾ​‍್ಯಲಿಯು ಪಟ್ಟಣದಾದ್ಯಾಂತ ಸಂಚರಿಸಿ ನಂತರ ಸವಣೂರು ಪಟ್ಟಣಕ್ಕೆ ತೆರಳಿದವು. 

ಈ ಸಂದರ್ಭದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಜಿಲ್ಲಾ ಅಧ್ಯಕ್ಷ ಸಿದ್ದರಾಜ ಕಲ್ಲಕೋಟಿ, ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರುಣ ಮಲ್ಲಾಡದ, ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರತೀಕ ಕೊಳೇಕರ, ತಾಲೂಕಾ ಯುವ ಮೋರ್ಚಾ ಅದ್ಯಕ್ಷ ಶಿವರಾಜ ರಾಯಣ್ಣವರ, ಯುವ ಮೋರ್ಚಾ ಕಾರ್ಯದರ್ಶಿಗಳಾದ ಕಾಶಿನಾಥ ಕಳ್ಳಿಮನಿ, ವಿನಯ ಮುಂಡಗೋಡ, ಮಲ್ಲಿಕಾರ್ಜುನ ಹಡಪದ, ಸಚಿನ ಮಡಿವಾಳರ, ಮಹಾದೇವಪ್ಪ ಹಡಪದ, ಪ್ರಶಾಂತ ಬಡ್ಡಿ, ಮುತ್ತು ಯಲಿಗಾರ, ಚೇತನ ಕಲಾಲ ಮುಖಂಡರಾದ ಶ್ರೀಕಾಂತ ಬುಳ್ಳಕ್ಕನವರ, ಸುಭಾಸ ಚವ್ಹಾಣ, ಮಂಜುನಾಥ ಬ್ಯಾಹಟ್ಟಿ, ಆನಂದ ಸುಭೇದಾರ, ಮಲ್ಲೇಶಪ್ಪ ಹರಿಜನ, ಕಿರಣ ಅವರಾದಿ, ಹನುಮಂತ ಮಾದರ,  ಬಸವರಾಜ ನಾರಾಯಣಪುರ, ಶರೀಫ ನದಾಫ್, ಸೇರಿದಂತೆ ಪುರಸಭೆ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬಿಜೆಪಿ ಪ್ರಮುಖರು ಹಾಗೂ ಕಾರ್ಯರ್ತರು ಇದ್ದರು. 


ಸುದ್ದಿ ಓದಿ