ಬ್ಯಾಡ್ಗಿ

ಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ

ಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ

ಬ್ಯಾಡಗಿ 03: ಅರೇ ಒಣ ಬೇಸಾಯಕ್ಕೆ ನೀರಾವರಿ ಸೌಲಭ್ಯ ಹಾಗೂ ಬೋರವೆಲ್ ಗಳಲ್ಲಿ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಕ್ಷೇತ್ರದಾದ್ಯಂತ ಇರುವ ಎಲ್ಲ ಕೆರೆಗಳ ಸಮಗ್ರ ಅಭಿವೃದ್ಧಿಗೆ ತಾವು ವಿಶೇಷ ಅನುದಾನವನ್ನು ಸರ್ಕಾರದಿಂದ ತರುತ್ತಿರುವುದಾಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.  

ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆರೆ ಆಧುನೀಕರಣ ಅಡಿಯಲ್ಲಿ 65ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸದರಿ ಕಾಮಗಾರಿಯಲ್ಲಿ ಕೋಡಿ ಕಾಲುವೆ 400ಮೀಟರ್ ಉದ್ದಕ್ಕೆ ಕಾಂಕ್ರೀಟ್ ಕಾಲುವೆ ಮತ್ತು ಸಿಡಿ ನಿರ್ಮಾಣ, ಕೆರೆ ತೂಬುಗಳ ದುರಸ್ತಿ ಪಡಿಸಿ, ಹೊಸ ಗೇಟ್ ಅಳವಡಿಕೆ ಮಾಡುವುದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ರೈತರ ಜಮೀನುಗಳಿಗೆ ಅರೇ ಒಣ ಬೇಸಾಯಕ್ಕೆ ನೀರಾವರಿ ಸೌಲಭ್ಯ ಕೈಗೊಳ್ಳಲು ನೆರವಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಕಾಳಮ್ಮ ಬಡಿಗೇರ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರ​‍್ಪ ಗೊಡಚಿ, ಪಿಎಲ್‌’ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವಪ್ಪ ಗೂಳೇರ,  ಎಸ್‌.ಎನ್‌.ಯಮುನಕ್ಕನವರ, ಸುಭಾಸ ಪಂಚಾನನ, ಇಂಜನೀಯರ್ ಆಂಜನೇಯ, ಪಿಡಿಓ ಗೋಪಾಲಸ್ವಾಮಿ, ಗುತ್ತಿಗೆದಾರ ಆರ್‌.ಎಚ್‌.ಶೇಖ್ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ