ದೇ. ಹೀಪ್ಪರಗಿ ಕೆರೆ ತುಂಬುವ ಹಾಗೂ ಪಡಗಾನೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ : ಜಾತಿ ರಾಜಕಾರಣ ಮಾಡಿಲ್ಲ: ಶಾಸಕಸೋಮನಗೌಡ
ತಾಳಿಕೋಟಿ24: ದೇ. ಹೀಪ್ಪರಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಮುಖ್ಯ ಧ್ಯೇಯವಾಗಿದೆ. ನನಗೆ ಎಲ್ಲ ಸಮಾಜದವರು ಬೆಂಬಲಿಸಿದ್ದಾರೆ. ನಾನು ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು.
ಭಾನುವಾರ ಮತಕ್ಷೇತ್ರದ ದೇ. ಹೀಪ್ಪರಗಿ ಕೆರೆ ತುಂಬುವ ರೂ. 1.39 ಕೋಟಿ ಹಾಗೂ ಪಡಗಾನೂರ ಗ್ರಾಮದಲ್ಲಿ ಮನೆ ಮನೆಗೆ ನಳ ಜೋಡಣೆ (ಜೆಜೆಎಂ) ರೂ. 1.33 ಕೋಟಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು. ಮತಕ್ಷೇತ್ರದಲ್ಲಿರುವ ಸೂಮಾರು ಮೂವತ್ತು ಕೆರೆಗಳನ್ನು ತುಂಬಿಸುವ ಯೋಜನೆ ಇದ್ದು ಇಗಾಗಲೇ ಕೆಲವು ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ನಡೆದಿವೆ. ಈ ಭಾಗದ ರೈತರು ನೀರಾವರಿ ಯೋಜನೆಯನ್ನು ಪಡೆಯಲಿಕ್ಕಾಗಿ ರೂ. 870 ಕೋಟಿ ಮೊತ್ತದ ಬೂದಿಹಾಳ-ಪೀರಾಪೂರ ಯೋಜನೆ ಕಾಮಗಾರಿ ಇಗಾಗಲೆ ನಡೆದಿದೆ. ಇದರ ಜೊತೆಗೆ ಚಿಮ್ಮಲಗಿಯ ಉಪ ಕಾಲೂವೆ ನಿರ್ಮಾಣಕ್ಕಾಗಿ ರೂ. 680 ಕೋಟಿ ಅನುದಾನಕ್ಕಾಗಿ ಮಂಜೂರಾತಿ ಪ್ರಕ್ರಿಯೆ ನಡೆದಿದೆ. ಕ್ಷೇತ್ರದ ಎಲ್ಲ ಜನರು ಶುದ್ಧ ಕುಡಿಯುವ ನೀರು ಕುಡಿಯುವಂತಾಗಲೂ ಕೇಂದ್ರದ ಮಹತ್ವಾಕಾಂಕ್ಷೆಯ ಜೆಜೆಎಂ ಯೋಜನೆ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಈ ಭಾಗದ ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ದನಾಗಿದ್ದು ನಿಮ್ಮ ಮನೆಯ ಜೀತದಾಳಾಗಿ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಲಚ್ಯಾಣ, ರೈತ ಮುಖಂಡ ಅಜೀಜ ಎಲಿಗಾರ, ಕಾಶೀನಾಥ ತಳಕೇರಿ, ಮಾತನಾಡಿದರು. ಈ ಸಂದರ್ಭದಲ್ಲಿ ಸಂಗನಗೌಡ ಬಿರಾದಾರ, ಗುತ್ತೀಗೆದಾರ ರವಿ ಪಾಟೀಲ, ರಾಜು ಮೇಟಗಾರ, ಪ್ರಭುಗೌಡ ದೊಡ್ಡಿಮನಿ, ಬಸವರಾಜ ಕಲ್ಲೂರ, ಮಕ್ತುಮಸಾಬ ಬೇಪಾರಿ, ಗ್ರಾಪಂ ಸದಸ್ಯರಾದ ಸೋಮನಾಥ ಯರನಾಳ, ವಿನೋದ, ನಬಿ ಮಣೂರ, ಎಇಇ ಬಂಕಾಪೂರ, ಶಾಂತಗೌಡ ಕೊಣ್ಣೂರ, ಲಾಲಾ ಮಡಿಕೆರ, ರಾಜು ಸಿಂದಗೇರಿ,(ಪಡಗಾನೂರ) ಹಣಮಂತ್ರಾಯಗೌಡ ಪಾಟೀಲ, ಗುರುರಾಜ ಅಪ್ಪು, ಪಿಡಿಓ ಬಗಲಿ, ಎಇಇ ವಾಲಿ ಉಪಸ್ಥಿತರಿದ್ದರು.