ತಾಳಿಕೋಟಿ

ಸಂಕನಾಳ ತಾಂಡಾದಿಂದ-ನರಸಲಗಿ ಕೂಡು ರಸ್ತೆ ಕಾಮಗಾರಿಗೆ ಭೂಮಿ ಪೂಜೆ : ಮನೆಯ ಮಗನಾಗಿ ಕೆಲಸ ಮಾಡುತ್ತೇನೆ: ಶಾಸಕ ಸೋಮನಗೌಡ

ಸಂಕನಾಳ ತಾಂಡಾದಿಂದ-ನರಸಲಗಿ ಕೂಡು ರಸ್ತೆ ಕಾಮಗಾರಿಗೆ ಭೂಮಿ ಪೂಜೆ : ಮನೆಯ ಮಗನಾಗಿ ಕೆಲಸ ಮಾಡುತ್ತೇನೆ: ಶಾಸಕ ಸೋಮನಗೌಡ

ತಾಳಿಕೋಟಿ23: ನಿವೇಲ್ಲರೂ ಪ್ರೀತಿ ಹಾಗೂ ವಿಶ್ವಾಸದಿಂದ ನನ್ನನ್ನು 5ವರ್ಷಗಳ ಅವಧಿಗಾಗಿ ಶಾಸಕನಾಗಿ ಆಯ್ಕೆ ಮಾಡಿದ್ದಿರಿ ನನಗೆ ಕೆಲಸ ಕೇಳುವ ಹಕ್ಕು ನಿಮಗೆಲ್ಲರಿಗೂ ಇದೆ. ನಾನು ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದು ದೇ. ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು. 

ಶನಿವಾರ ಮತಕ್ಷೇತ್ರದ ಸಂಕನಾಳ ತಾಂಡಾದಲ್ಲಿ ಲೋಕೊಪಯೋಗಿ ಇಲಾಖೆ ವಿಜಯಪೂರ ಉಪ ವಿಬಾಗ ಬಾಗೇವಾಡಿ ಇವರು ಹಮ್ಮಿಕೊಂಡ ರೂ. 2ಕೋಟಿ ಮೊತ್ತದ ಸಂಕನಾಳ ತಾಂಡಾದಿಂದ - ನರಸಲಗಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು. 

ಇಂದು ನಿಮ್ಮ ಗ್ರಾಮದಲ್ಲಿ ರೂ. 2ಕೋಟಿ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇನೆ. ಸದರಿ ರಸ್ತೆ ಉತ್ತಮ ಗುಣಮಟ್ಟದ್ದಾಗಿರಲು ಗುತ್ತೀಗೆದಾರರಿಗೆ. ಆದೆಶಿಸುತ್ತೇನೆ. ಗ್ರಾಮಸ್ತರು ಅವರೊಂದಿಗೆ ಸಹಕರಿಸಿ ಉತ್ತಮ ಕೆಲಸ ತೆಗೆದುಕೊಳ್ಳಬೇಕು ಈ ಭಾಗದ ಜನರ ಬಹುದಿನಗಳ ಬೆಡಿಕೆಯಾಗಿದ್ದ ಸಂಕನಾಳ-ಬಾಗೇವಾಡಿ ರೂ. 3ಕೋಟಿ ರಸ್ತೆ ಇಗಾಗಲೇ ಮಾಡಿಕೊಟ್ಟಿರುವೆ. ಶಿಘ್ರದಲ್ಲಿಯೆ ಅಗಸಬಾಳ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಲಿದ್ದೆನೆ. ಈ ಭಾಗದ ರೈತರಿಗೆ ಅನುಕುಲವಾಗಲು ಹುಣಶ್ಯಾಳ, ಅಗಸಬಾಳ, ಹಾಗೂ ಹೂ. ಹೀಪ್ಪರಗಿ ಕೆರೆಗಳನ್ನು ತುಂಬಿಸಲಾಗುವುದು. ಈ ಗ್ರಾಮದ ಹಲವಾರು ಸಮಸ್ಯೆಗಳು ಗಮನಕ್ಕೆ ತಂದಿದ್ದಿರಿ. ಇದರಲ್ಲಿ ಮುಖ್ಯವಾಗಿ ಕುಡಿಯುವ ನೀರು ಹಾಗೂ ಮಹಿಳೆಯರ ಶೌಚಾಲಯದ ವ್ಯವಸ್ಥೆ, ಇದು ಗ್ರಾಮಪಂಚಾಯಿತಿಯವರ ಕೆಲಸವಾಗಿದ್ದು, ಪಿಡಿಓ ಜೋತೆಯಲ್ಲಿ ಮಾತನಾಡುತ್ತೇನೆ. ಈ ತಾಂಡಾದ ಒಳಗಿನ ಕೆಟ್ಟು ಹೊಗಿರುವ ರಸ್ತೆಗಳ ಅಭಿವೃದ್ಧಿಗಾಗಿ ರೂ. 50ಲಕ್ಷ ಅನುದಾನ ಶಿಘ್ರದಲ್ಲಿಯೆ ಬಿಡುಗಡೆಗೊಳಿಸುತ್ತೇನೆ. ಇದರ ಜೋತೆಗೆ ಆಂಜನೇಯ ದೆವಸ್ಥಾನ, ಹೇಮರೆಡ್ಡಿ ಮಲ್ಲಮ್ಮ ಹಾಗೂ ಅಂಬಿಗೇರ ಚೌಡಯ್ಯ ದೆವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡುತ್ತೇನೆ.  

ನಾನೊಬ್ಬ ಜನಸೇವಕನಾಗಿದ್ದು ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶಿರ್ವಾದ ಮುಂದೆಯು ಹಿಗೆಯೆ ನನ್ನ ಮೇಲಿರಲಿ ಎಂದರು. ಸಹಾಯಕ ಅಭಿಯಂತರ ಜಿ ಸಿ ವಂದಾಲ, ನ್ಯಾಯವಾದಿಗಳಾದ ಜಿ ಬಿ ಬಾಗೇವಾಡಿ, ಹಾಗೂ ಅನೀಲ ರಾಠೋಡ ಮಾತನಾಡಿದರು. 

ಹುಣಶಾಳ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಮಹಾಂತಗೌಡ ಬಿರಾದಾರ, ಉಪಾಧ್ಯಕ್ಷ ಅಪ್ಪು ನಾಯಕ, ಗ್ರಾಪಂ ಸದಸ್ಯೆ ಕಮಲಾಬಾಯಿ ರಾಠೋಡ, ಮಲ್ಲನಗೌಡ ಬಿರಾದಾರ, ಗುತ್ತೀಗೆದಾರ ಮೋಹನ ಹೀರೆಗೌಡ, ಚಂದ್ರಶೇಖರ ಪಾಟೀಲ್, ಸುನೀಲ ರಾಠೋಡ, ಅಶೋಕ ಹೀರೆಗೌಡರ, ಕುಮಾರಗೌಡ ಪಾಟೀಲ್, ಹುಸೇನ ಮುಲ್ಲಾ, ಉಪಸ್ಥಿತರಿದ್ದರು. 


ಸುದ್ದಿ ಓದಿ