ಕಾರವಾರ

ಬನವಾಸಿ ಆರೋಗ್ಯ ಕೇಂದ್ರಕ್ಕೆ ಭೀಮಣ್ಣ ನಾಯ್ಕ್‌ ಭೇಟಿ

ಬನವಾಸಿ ಆರೋಗ್ಯ ಕೇಂದ್ರಕ್ಕೆ ಭೀಮಣ್ಣ ನಾಯ್ಕ್‌ ಭೇಟಿ

ಬನವಾಸಿ 29: ಕೊರೋನಾ ಮಹಾಮಾರಿಯಿಂದ ಜನ ಜೀವನದ ಮೇಲೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಕಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕಾಂಗ್ರೇಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್‌ ಹೇಳಿದರು. 

ಗುರುವಾರದಂದು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊವೀಡ್ ಬಗ್ಗೆ ಕೈಗೊಂಡ ಕ್ರಮಗಳನ್ನು ಪರೀಶೀಲಿಸಿ ಮಾತನಾಡಿದ ಅವರು ಸಾರ್ವಜನಿಕರು ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆರೋಗ್ಯ ಸಿಬ್ಬಂದಿಗಳನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆಯಬೇಕು. ಮನೆಯಲ್ಲಿಯೇ ಇರಿ ಜಾಗೃತರಾಗಿರಿ. ಕೊರೋನಾ ರಣಕೇಕೆಯನ್ನು ತಡೆಯುವಲ್ಲಿ ಸಾಮಾಜಿಕ ಅಂತರ ಹಾಗೂ ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಬನ್ನಿ. ಆರೋಗ್ಯ ಸಮಸ್ಯೆ ಇದ್ದವರು ಅವಶ್ಯಕವಾಗಿ ಎಚ್ಚರಿಕೆಯಿಂದಿರಬೇಕು. ಸಾರ್ವಜನಿಕರು ಭಯಮುಕ್ತರಾಗಿ ಬಂದು ಕೋವಿಡ್ ಟೆಸ್ಟ್‌ ಮಾಡಿಸಿ ಆರೋಗ್ಯ ಇಲಾಖೆಯ ಜೊತೆ ಕೈಜೊಡಿಸಿ, ಅವಶ್ಯಕತೆಯಿದ್ದಲ್ಲಿ ಕಾಂಗ್ರೇಸ್ ಪಕ್ಷದಿಂದ ಹಾಗೂ ನಮ್ಮ ಕಾರ್ಯಕರ್ತರಿಂದ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು. 

ಬನವಾಸಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯ್ಕ್‌ ಮಾತನಾಡಿ, ಸಾರ್ವಜನಿಕರು ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದರು.  

ವೈದ್ಯಾಧಿಕಾರಿ ಜಯಶ್ರೀ ಹೆಗಡೆ, ಬನವಾಸಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯ್ಕ್‌, ಮುಖಂಡರಾದ ಬಸವರಾಜ ದೊಡಮನಿ, ಮಧುಕೇಶ್ವರ ನಾಯ್ಕ್‌, ಗಣಪತಿ ಗೌಡ, ಪ್ರಸನ್ನ ಶೆಟ್ಟಿ, ಜಲೀಲಸಾಬ್ ಹಾಗೂ ಆರೋಗ್ಯ ಸಿಬ್ಬಂದಿ  ಇದ್ದರು. 


ಸುದ್ದಿ ಓದಿ