ಜಿಲ್ಲಾ ಮಟ್ಟಕ್ಕೆ ಭಾಷಸಾಬ್ ಆಯ್ಕೆ
ತಾಳಿಕೋಟೆ 23:ಪಟ್ಟಣದ ವಿಕಾಸ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಭಾಷಸಾಬ್ ಬಾಗವಾನ ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವೀತಿಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮುದ್ದೇಬಿಹಾಳದ ಎಮ್‌ಜಿವಿಸಿ ಪ್ರೌಢ ಶಾಲೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಪ್ರಥಮ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಎರಡೂ ಆಟದಲ್ಲಿಯೂ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ. ವಿದ್ಯಾರ್ಥಿಯ ಸಾದನೆಗೆ ಸಂಸ್ಥೆಯ ಗೌರವಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ, ಅಧ್ಯಕ್ಷರಾದ ರಾಮನಗೌಡ ಬಾಗೇವಾಡಿ, ಸೆಕ್ರೆಟರಿ ವ್ಹಿ.ಆಯ್.ಬಾಗೇವಾಡಿ (ಪಾಟೀಲ), ಪ್ರಧಾನ ಗುರುಗಳಾದ ಎಸ್.ಬಿ.ಬಿರಾದಾರ, ಎನ್.ಎಲ್.ನಾಗರಾಳ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.