ರಾಣೆಬೆನ್ನೂರ

ಪಾಶ್ಚಾತ್ಯೀಕರಣದಿಂದ ಭಾರತೀಯ ಸಂಸ್ಕೃತಿಗೆ, ಕಲೆಗಳಿಗೆ ದಕ್ಕೆ: ಬಾನುವಳ್ಳಿ

ಪಾಶ್ಚಾತ್ಯೀಕರಣದಿಂದ ಭಾರತೀಯ ಸಂಸ್ಕೃತಿಗೆ, ಕಲೆಗಳಿಗೆ ದಕ್ಕೆ: ಬಾನುವಳ್ಳಿ

ರಾಣಿಬೆನ್ನೂರ 20: ಇಂಗ್ಲೀಷ್‍ನ ಅತಿಯಾದ ವ್ಯಾಮೋಹ ಹಾಗೂ ಇಂದಿನ ಪಾಶ್ಚಾತ್ಯೀಕರಣದಿಂದ ವಿದಾರ್ಥಿಗಳಲ್ಲೂ, ಯುವ ಸಮುದಾಯದಲ್ಲೂ  ಭಾರತೀಯ ಸಂಸ್ಕೃತಿಯ ಜೀವಾಳವಾಗಿರುವ ಗ್ರಾಮೀಣ ಸೊಗಡಿನ ಕಲೆಗಳ ಬಗ್ಗೆ ಹೆಚ್ಚಿನ ನಿರಾಸಕ್ತಿ ಮೂಡುತ್ತಿದೆ,  ಅವಸಾನದಂಚಿನಲ್ಲಿ ಸಾಗುತ್ತಿರುವ ಈ ಕಲೆಗಳ  ಬಗ್ಗೆ ಸರ್ವÀರಲ್ಲೂ ಸಹ ಅಭಿಮಾನ, ಆಸಕ್ತಿ, ಅಭಿರುಚಿ ಕ್ಷೀಣಿಸುತ್ತಿರುವುದು ಬಹಳಷ್ಟು ವಿಷಾಧನೀಯ ಸಂಗತಿಯಾಗಿದೆ ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಹೇಳಿದರು.

ಜಿಲ್ಲಾ  ಕನ್ನಡ ಜಾಗೃತಿ ವೇದಿಕೆ, ಕಾಕಿ ಜನಸೇವಾ ಸಂಸ್ಥೆ,  ಜಾನಪದ ಪರಿಷತ್, ಯಕ್ಲಾಸಪುರದ ಜನನಿ ಜಾನಪದ ಕಲಾವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಆಶ್ರಯದಲ್ಲಿ ನಗರದ ಹೊರ ವಲಯದ  ಮಾರುತಿ ನಗರದ ಕಾಲಭೈರವನಾಥ ದೇವಸ್ಥಾನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ  ಜಾನಪದ ಸಂಭ್ರಮ, ಸುಗಮ ಸಂಗೀತ, ಸಂಕ್ರಾಂತಿ ಸುಗ್ಗಿ ಹೊಡಿಯೋಣ ಹುಗ್ಗಿ ರಸಮಂಜರಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಕನ್ನಡಿಗರ ಜಾಗೃತಿ ಸಮಾವೇಶ, ಮಕ್ಕಳ ದಿನಾಚರಣೆ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಗ್ರಾಮೀಣ ಕಲೆಗಳು ಮನುಷ್ಯನ ಜೀವಾಳವಾಗಿದ್ದು, ಗ್ರಾಮೀಣ ಸೊಗಡಿನ ಕಲೆಗಳಿಂದ ಉತ್ತಮ ಸಂಪ್ರದಾಯ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದಾಗ ದೇಶದ ಸಂಪ್ರದಾಯ ಉಳಿಯಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಸರ್ವರೂ ಪ್ರಯತ್ನಶೀಲರಾಗಿ ಶೃಮಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಸರ್ವರೂ ಗ್ರಾಮೀಣ ಕಲೆಗಳ ಉಳಿವಿಗಾಗಿ ಪ್ರಯತ್ನಿಸಬೇಕಾಗಿದೆ ಎಂದರು.

ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಮಂಜುನಾಥ ದೇವ ,ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಮಂಜುನಾಥ ದುಗ್ಗತ್ತಿ ಮಾತನಾಡಿದರು.

ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ನಗರಸಭಾ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಜನಪದ ಅಕಾಡೆಮಿಯ ರಾಜ್ಯ ಸದಸ್ಯ ಕೆ.ಸಿ.ನಾಗರಜ್ಜಿ, ಜಿಲ್ಲಾ ಸ್ವಾಭಿಮಾನಿ ಕರವೇ ಅಧ್ಯಕ್ಷ ಶಿವಕುಮಾರ ಜಾಧವ, ಮಹಿಳಾ ಸಂಸ್ವನ ಕೇಂದ್ರದ ಅಧ್ಯಕ್ಷೆ ರೇಣುಕಾ ಎಂ ಲಮಾಣಿ, ಸಿದ್ದಣ್ಣ ಚಿಕ್ಕಬಿದರಿ, ಎಚ್.ಆರ್ ಶಿವಕುಮಾರ, ಶರೀಪ ಶೇಖಸನದಿ, ಪರಶುರಾಮ ಬಣಕಾರ, ಹನುಮಂತಪ್ಪ ಕಬ್ಬಾರ, ಶಶಿಕಲಾ ಹಾದರಹಳ್ಳಿ, ಪದ್ಮಜಾ ನಾಗರಜ್ಜಿ, ಕೊಟ್ರೇಶ ದುಗ್ಗತ್ತಿ, ಎಸ್‍ಎಚ್ ಮೇಟಿ, ರವಿ ಗೋಣೆಪ್ಪನವರ, ಯಲ್ಲಪ್ಪ ಛತ್ರದ, ಮರುಳಸಿದ್ದಪ್ಪ ಹೊಸಕೇರಿ, ಬಸಲಿಂಗಯ್ಯ ಹಿರೇಮಠ, ಸೇರಿದಂತೆ ಕಲಾವಿದರು ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಯಕ್ಲಾಸಪುರದ ಜನನಿ ಜಾನಪದ ಕಲಾವೇದಿಕೆಯ ಕಲಾವಿದರು ನಡೆಸಿಕೊಟ್ಟ ಗ್ರಾಮೀಣ ಮತ್ತು ಕನ್ನಡಪರ ಸುಮಧುರ ಹಾಡುಗಳು ಪ್ರೇಕ್ಷಕರ ಮನರಂಜಿಸಿದವು.


ಫsÉೂೀಟೋ- ಇಲ್ಲಿನ ಮಾರುತಿ ನಗರದಲ್ಲಿ ನಡೆದ ಜನಪದ ಸಂಭ್ರಮ ಮತ್ತು ಕನ್ನಡ ಜಾಗೃತಿ ಸಮಾವೇಶÀವನ್ನು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಉದ್ಘಾಟಿಸಿದರು./ ಜನಮನ ರಂಜಿಸಿದ ಕಲಾವಿದರು.

ಸುದ್ದಿ ಓದಿ