ವಿದ್ಯಾರಣ್ಯ ಐಟಿಐ ಕಾಲೇಜಿನಲ್ಲಿ ಭಗತ್ಸಿಂಗ್ ಜನ್ಮ ದಿನಾಚರಣೆ
ಹೊಸಪೇಟೆ 25: ನಗರದ ವಿದ್ಯಾರಣ್ಯ ಐಟಿಐ ಕಾಲೇಜಿನಲ್ಲಿ ದಿನಾಂಕ: 25.09.2023ರಂದು ಸೋಮವಾರ ಭಗತ್ಸಿಂಗ್ ಅವರ 116ನೇ ಜನ್ಮ ದಿನಾಚರಣೆಯನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಎಐಡಿವೈಓ ಸಂಘಟನೆಯ ವತಿಯಿಂದ ಆಚರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಾಲಾಕ್ಷ ಹಡಗಲಿ ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು ಮಾತನಾಡುತ್ತಾ “ಸಮಾಜವಾದ ಎಂಬುದು ನಾಗರಿಕತೆಯ ಅತ್ಯುನ್ನತ ಆದರ್ಶ. ಸಮಪಾಲು, ಸಮಬಾಳು ಎಂಬುದು ಕಾವ್ಯಾತ್ಮಕ ಅಭಿವ್ಯಕ್ತಿ. ಜಾತಿ, ಧರ್ಮ, ಅಂತಸ್ತುಗಳಲ್ಲಿ ಮೇಲ-ಕೀಳು, ಶ್ರೀಮಂತ-ಬಡವ ಎಂಬ ತಾರತಮ್ಯಗಳು ಇಲ್ಲದ ಆಡಳಿತ ವ್ಯವಸ್ಥೆ ಸಮಾಜವಾದ ವ್ಯವಸ್ಥೆ. ರಷ್ಯಾ ಸಮಾಜವಾದಿ ವ್ಯವಸ್ಥೆಯಿಂದ ಸ್ಪೂರ್ತಿಗೊಂಡು ಭಗತ್ ಸಿಂಗ್ ತಮ್ಮ ಸಂಘಟನೆಯನ್ನು ಸಮಾಜವಾದಿ ಸಿದ್ಧಾಂತದಲ್ಲಿ ಮರುಕಟ್ಟಿದರು. ದೇಶದ ಶೇಕಡ 99ಅ ರಷ್ಟಿರುವ ಬಡವರು, ರೈತ ಕಾರ್ಮಿಕರು ಸುಖಕರ ಜೀವನಕ್ಕೆ ಭಗತ್ ಸಿಂಗ್ ಅವರ ಸಮಾಜವಾದವೇ ಪರಿಹಾರ. ” ಎಂದು ಚರಿತ್ರೆಯ ಸಂಗತಿಗಳನ್ನು ನೆನಪಿಸಿಕೊಂಡರು.
ಅಭಿಷೇಕ್ ಕಾಳೆ ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು ಮಾತನಾಡುತ್ತಾ “ಪ್ರಸಕ್ತ ವ್ಯವಸ್ಥೆಯಲ್ಲಿಯೇ ಲಾಭ ಮಾಡಿಕೊಳ್ಳುತ್ತೀರುವ ಶೇಕಡ 01ಅ ರಷ್ಟಿರುವ ಶ್ರೀಮಂತ-ಬಂಡವಾಳಶಾಹಿಗಳು ಸಮಾಜವಾದ ವ್ಯವಸ್ಥೆಯ ಬಗ್ಗೆ ಇಲ್ಲಸಲ್ಲದ ಸುಳ್ಳನ್ನು ಪ್ರಚಾರ ಮಾಡುತ್ತಾರೆ ಹಾಗೂ ತಮ್ಮ ಕೈಗೊಂಬೆ ಸರ್ಕಾರಗಳ ಮೂಲಕ ಸಮಾಜವಾದಿ ಹೋರಾಟಗಳನ್ನು ಮುರಿಯುವ ಪ್ರಯತ್ನ ಮಾಡುತ್ತಿರುತ್ತಾರೆ. ಸಮಾಜವಾದದ ಕನವರಿಕೆ ಮಾಡುವುದರಿಂದ ಸಮಾಜವಾದ ವ್ಯವಸ್ಥೆ ತಾನಾಗಿಯೇ ಬರುವುದಿಲ್ಲ. ಸಮಾಜವಾದಿ ವ್ಯವಸ್ಥೆಯನ್ನು ಕಟ್ಟಲು ಯುವಜನರು ಮುಂದಾಗಬೇಕು” ಎಂದು ಕರೆ ಇತ್ತರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಯುವಕರು ಭಾಗವಹಿಸಿದ್ದರು. ಶೇಖರ್ ಬಾಬು, ಅಜಯ್ ಬೊಮ್ಮಗಟ್ಟ, ಪಂಪಾಪತಿ, ಎರಿ್ರಸ್ವಾಮಿ, ಕಲ್ಮೇಶ್ ಎಐಡಿವೈಓನ ಜಿಲ್ಲಾ ಸಮಿತಿ ಸದಸ್ಯರು ಹಾಜರಿದ್ದರು.