ದಿ. 26 ರಂದು ಬೆಟ್ಟದ ಬೇಟೆ ಪುಸ್ತಕ ಲೋಕಾರ್ಪಣೆ

ಗೋಕಾಕ 22: ಹಿರಿಯ ಕಾದಂಬರಿಕಾರ ಗೋಕಾಕ ಮಿಲ್ ನ ನಿವೃತ್ತ ನೌಕರ ಎಸ್.ಆರ್.ನಲವಡೆ ಅವರು ಬರೆದ ಮೂರನೇ ಜೋಡಿ ಕಾದಂಬರಿ ಕೃತಿ “ಬೆಟ್ಟದ ಬೇಟೆ” ಪುಸ್ತಕ ಲೋಕಾರೆ್ಣ ಕಾರ್ಯಕ್ರಮ ಗೋಕಾಕದ ಮಯೂರ ಶಾಲೆ ಹತ್ತಿರ ನಗರಸಭೆ ಸಮುದಾಯ ಭವನದಲ್ಲಿ ರವಿವಾರ ದಿ. 26 ರಂದು ಮುಂಜಾನೆ. 10.30ಕ್ಕೆೆ ಜರುಗಲಿದೆ
ಅಖಿಲ ಬಾರತ ಶರಣ ಸಾಹಿತ್ಯ ಗೋಕಾಕ ತಾಲೂಕು ಅಧ್ಯಕ್ಷ ಹಾಗೂ ಗಣ್ಯವರ್ತಕ ಮಹಾಂತೇಶ ಗಂ.ತಾಂವಶಿ ಸಮಾರಂಭ ಉದ್ಘಾಟಿಸುವರು. ಶಿಂಧೀಕುರಬೇಟ ಹಿರಿಯ ಸಾಹಿತಿಗಳು. ಅಶೋಕಬಾಬು ನೀಲಗಾರ ಅಧ್ಯಕ್ಷತೆವಹಿಸುವರು. ಗೋಕಾಕ ಹಿರಿಯ ಸಾಹಿತಿಗಳು ಡಾ.ಸಿ.ಕೆ.ನಾವಲಗಿ ಕೃತಿ ಲೋಕಾರೆ್ಣ ಮಾಡುವರು. ಸಾಹಿತಿ ಹಾಗೂ ಕಲಾವಿದ ಪ್ರಾ.ಜಯಾನಂದ ಮಾದರ, ಕೃತಿ ವಿಮರ್ಶೆ ಮಾಡುವರು.
ಕೌಜಲಗಿಯ ಹಿರಿಯ ಸಂಶೋಧಕ, ಬರಹಗಾರ ಪ್ರಕಾಶ ಕೋಟಿನತೋಟ ಹಾಗೂ ಗೋಕಾಕ ಚಿಂತನ ಕಮ್ಮಟದ ಸಂಚಾಲಕಿ ಶಕುಂತಲ ದಂಡಗಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು