ತಾಳಿಕೋಟಿ

ಗ್ರಾಮೀಣ ಭಾಗಕ್ಕು ಅತ್ಯುತ್ತಮ ರಸ್ತೆ: ಶಾಸಕ ಪಾಟೀಲ

ಗ್ರಾಮೀಣ ಭಾಗಕ್ಕು ಅತ್ಯುತ್ತಮ ರಸ್ತೆ: ಶಾಸಕ ಪಾಟೀಲ

ತಾಳಿಕೋಟೆ17: ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಕನಸಿನಂತೆ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮೀಣ ಭಾಗಕ್ಕೂ ಸಹ ಅತ್ಯುತ್ತಮ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಅತ್ಯತ್ತಮ ರಸ್ತೆ ಹಾಗೂ ಪ್ರತಿ ರೈತನ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಸಮಗ್ರ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು. 

ಅವರು ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಕೊಡಗಾನೂರದಿಂದ ಲಕ್ಕುಂಡಿ ಕ್ರಾಸ್‌ದರೆಗಿನ ರಸ್ತೆ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. 

ಮತಕ್ಷೇತ್ರದ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ಬೂದಿಹಾಳ ಪಿರಾಪೂರ ಯೋಜನೆ ಎರಡನೇ ಹಂತದ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಯೋಜನೆಯನ್ನು ಮಾರ್ಚ ಅಂತ್ಯದೊಳಗೆ ಮುಗಿಸಲು ಸೂಚನೆ ನೀಡಲಾಗಿದೆ. ಬಿಜಾಪೂರ ಮುಖ್ಯ ಕಾಲುವೆಯಿಂದ ಉಪ ಕಾಲುವೆಗಳ ನಿರ್ಮಾಣಕ್ಕೆ 680 ಕೋಟಿ ವೆಚ್ಚದಲ್ಲಿ ಅನುಮೋದನೆ ಸಿಕ್ಕಿದ್ದು ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವದು. ಎರಡು ಯೋಜನೆಗಳಿಂದ ದೇವರ ಹಿಪ್ಪರಗಿ ಮತಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಡಲಿದೆ. ಇದರಿಂದ ರೈತನ ಬಾಳು ಹಸನಾಗಲಿದೆ. ಈಗಾಗಲೇ ಗ್ರಾಮೀಣ ಮುಖ್ಯ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ದಿ ಕೈಕೊಳ್ಳಲಾಗುತ್ತಿದೆ. ಈ ಭಾರಿ ಮಳೆ ಜಾಸ್ತಿಯಾಗಿರುವದರಿಂದ ಅತಿವೃಷ್ಠಿಯಿಂದ ಬೆಳೆಗಳು ಹಾಳಾಗಿವೆ. ಅವುಗಳಿಗೆ ರಾಜ್ಯ ಸರಕಾರ ಶಿಘ್ರದಲ್ಲಿಯೇ ಪರಿಹಾರ ನೀಡಲಿದೆ. ಕೇಂದ್ರ ಸರಕಾರ ಆಯುಷ್ಮಾನ ಆರೋಗ್ಯ ಯೋಜನೆಯಿಂದ ಪ್ರತಿಯೊಬ್ಬರಿಗೂ 5 ಲಕ್ಷದವರೆಗೆ ವೆಚ್ಚ ಭರಿಸಲಿದೆ. ಇದರಿಂದ ಬಡವರಿಗೆ ಸಾಕಷ್ಟು ಅನಕೂಲವಾಗಲಿದ್ದು ಆರೋಗ್ಯ ಕಾರ್ಯಕರ್ತರು ಮನೆಮನೆಗೂ ಭೇಟಿ ನೀಡಿ ಆಯುಷ್ಮಾನ ಕಾರ್ಡಗಳನ್ನು ಮಾಡಿಸಿಕೊಡಬೇಕು ಎಂದರು. 

ಜಿಲ್ಲಾ ಬಿಜೆಪಿ ಅದ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಟಿಎಚ್‌ಓ ಡಾ.ಸತಿಶ ತಿವಾರಿ, ಪಿಬಡ್ಲುಡಿ ಸಹಾಯಕ ಅಭಿಯಂತರ ಡಿ.ಬಿ.ಕಲಬುರ್ಗಿ, ರಾಮನಗೌಡ ಕೌಲಗಿ, ಮುಖಂಡರಾದ ಸಂಗನಗೌಡ ಹೆಗರೆಡ್ಡಿ, ಬಸನಗೌಡ ಬಿರಾದಾರ, ಭಿಮನಗೌಡ ಸಿದ್ದರೆಡ್ಡಿ, ಸಿದ್ದು ಬುಳ್ಳಾ, ಮಲ್ಲನಗೌಡ ಬಿರಾದಾರ, ಭೀಮನಗೌಡ ಲಚ್ಯಾಣ, ಗುರನಗೌಡ ಗುರಡ್ಡಿ, ಮಲ್ಲನಗೌಡ ಹೊಸಮನಿ, ಶ್ರೀಕಾಂತ ಹೊರಗಿಮನಿ, ರಾಜುಗೌಡ ಇಬ್ರಾಹಿಂಪೂರ, ಸಾಯಬಣ್ಣ ಆಲ್ಯಾಳ, ಸೋಮನಗೌಡ ಹಾದಿಮನಿ, ಶಂಕ್ರಗೌಡ ದೇಸಾಯಿ, ಮುತ್ತುಗೌಡ ಮಾಳಿ, ಸಿದ್ದನಗೌಡ ಕಾರಗನೂರ, ಆನಂದಬಾಬು ಬಿರಾದಾರ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ