ದ.ರಾ.ಬೇಂದ್ರೆ ಜಯಂತಿ ಆಚರಣೆ
ರಾಣಿಬೆನ್ನೂರ 05: ಬೇಂದ್ರೆಯವರು ನಡೆಸಿದ ಸರಳವಾದ ಬದುಕೇ ಸಾಹಿತ್ಯವಾಗಿ ಹೊರಹೊಮ್ಮಿದೆ. ಜಾನಪದ ಕಾವ್ಯ ಶೈಲಿ ಮೂಲಕ ಕವಿ ಮನಸ್ಮ್ಸಗಳನ್ನ ಸೆಳೆಯುವ ಸಾಮರ್ಥ್ಯ ಅವರು ಹೊಂದಿದ್ದರು. ಎಂದು ದಾವಣಗೇರಿ ದವನ ಪಪೂ ವಿದ್ಯಾಲಯದ ಕನ್ನಡ ಉಪನ್ಯಾಸಕ ಕೊಟ್ರಪ್ಪ ಕಮಲಾಪುರ ಹೇಳಿದರು.
ಅವರು ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ರಾ. ಬೇಂದ್ರೆಯವರ 125 ನೇಯ ಜಯಂತಿ ಹಾಗೂ ಕವಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ಭಾಷೆಯ ಪ್ರಾದೇಶಿಕ ಶಬ್ದಗಳನ್ನು ಸಮರ್ಥವಾಗಿ ದುಡಿಸಿಕೊಂಡ ನುಡಿ ಮಾಂತ್ರಿಕ, ಪ್ರಕೃತಿಯ ಭಾವಗಳನ್ನು ತನ್ನ ಶಬ್ದ ಚಮತ್ಕಾರದಲ್ಲಿ ಹೆಣೆದ ಸಾಹಿತ್ಯದ ಹೂಗಾರರಾಗಿದ್ದಾರೆ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಪುಟ್ಟಮ್ಮ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಚೇತನ ಪೂಜಾರ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಬಾವಿಕಟ್ಟಿ, ಹನುಮಂತಪ್ಪ ಜಿ.ಆರ್, ಗದಿಗಪ್ಪ ಓಲೇಕಾರ, ಮಂಜುನಾಥ ಶಿವಮೊಗ್ಗ, ಶಿವಯ್ಯ ಹಿರೇಮಠ, ಮಂಜು ಪೂಜಾರ, ದೇವರಾಜ ಮಲ್ಲಾಪುರ, ರೇಣುಕಮ್ಮ, ರೇಖಾ, ಅಶೋಕ ಬಿ.ಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.