ಫೆ.17ರಂದು ಬಳ್ಳಾರಿ ಮಂಜ ಸಿನೆಮಾ ಚಿತ್ರಿಕರಣ ಪ್ರಾರಂಭ
ಬಳ್ಳಾರಿ 29:ನಗರದಲ್ಲಿ ಇಲ್ಲಿಯವರೆಗೆ ಅನೇಕ ಚಲನಚಿತ್ರಗಳ ಚಿತ್ರಿಕರಣ ನಡೆದಿದ್ದು ಈಗ ಬಳ್ಳಾರಿಯವರೆ ಆದ ನಾಯಕನಟ ಮಂಜುನಾಥನಿಂದ ಬಳ್ಳಾರಿ ಮಂಜ ಎಂಬ ಹೊಸ ಕೌಟುಂಬಿಕ ಸಿನೆಮಾದ ಚಿತ್ರಿಕರಣ ಫೆ.17ರಂದು ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಅವರು ಸೋಮುವಾರ ಪತ್ರಿಕಾಭವನದಲ್ಲಿ ತಮ್ಮ ಚಿತ್ರತಂಡದೊಂದಿಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಈ ಸಿನೆಮಾ ನಗರದ ಕನರ್ಾಟಕ ಯುವಕ ಸಂಘದ ವಿಷಯ ವಸ್ತುವಾಗಿ ಕನ್ನಡಿಗರಾದ ನಾವು ಇತರೆ ಭಾಷಿಕರು ನಮ್ಮ ಕನ್ನಡಿಗರಿಗೆ ಸಹಕಾರಿಯಾಗಿರದೇ ಅನ್ಯಾಯ ಮಾಡಲು ಬಂದಾಗ ಅವರನ್ನು ಎದುರಿಸುವ ಪ್ರಯತ್ನ ಮತ್ತು ಕನರ್ಾಟಕದಲ್ಲಿ ಅನ್ಯ ಭಾಷಿಕರು ಕನ್ನಡಿಗರಾಗಿ ಬಾಳಿ ಎಂಬುವುದು ಈ ಚಿತ್ರ ಉದ್ದೇಶ. ಸುಮಾರು 70 ಲಕ್ಷ ರೂ ಬಡ್ಜಟ್ ನ ಈ ಸಿನೆಮಾದ ಚಿತ್ರಿಕರಣ ಬೆಂಗಳೂರು, ಮಲೆನಾಡು, ಬಳ್ಳಾರಿಯಲ್ಲಿ ಚಿತ್ರಿಕರಣಗೊಳ್ಳಲಿದ್ದು 45 ದಿನಗಳ ಕಾಲವದಿಯಲ್ಲಿ ಸ್ಥಳಿಯ ಕಲಾವಿದರನ್ನು ಬಳಸಿಕೊಂಡು ಚಿತ್ರಿಕರಣ ನಡೆಸಲಿದ್ದೇವೆ ಎಂದರು. ಫೆ.17ರಂದು ನಗರದ ತೇರುಬೀದಿಯ ಪೇಟೆಬಸವೇಶ್ವರ ದೇವಸ್ಥಾನದ ಬಳಿ ರಾಘವೇಂದ್ರ ರಾಜಕುಮಾರ, ವಿನಯರಾಜಕುಮಾರ, ಚಿತ್ರಿಕರಣಕ್ಕೆ ಚಾಲನೆ ನೀಡಲಿದ್ದಾರೆ. ಈ ಚಿತ್ರದ ನಿಮರ್ಾಪಕರಾಗಿ ತಮ್ಮ ಧರ್ಮಪತ್ನಿ ಜಿ.ನಂದಾ ಮಂಜುನಾಥ ಅವರಾಗಿದ್ದು. ಮಗ ವಿನಯಕುಮಾರ ಕಳನಾಯಕನಾಗಿ ನಟಿಸಲಿದ್ದಾರೆಂದು ತಿಳಿಸಿದರು. ಚಿತ್ರದ ನಿಧರ್ೇಶಕರಾಗಿ ತಾಲೂಕಿನ ವೈ.ಕಗ್ಗಲ್ ಗ್ರಾಮದ ಲಿಂಗರಾಜು, ವಿವರಣೆ ನೀಡುತ್ತಾ ಈ ಚಿತ್ರದಲ್ಲಿ ಐಶ್ವರ್ಯ, ನಾಯಕಿಯಾಗಿ ನಟಿಸಲಿದ್ದಾರೆ. ಕಳನಟರಾಗಿ ದರ್ಮ ನಟಿಸಲಿದ್ದು. ಸಂಗೀತವನ್ನು ಸತೀಶ್ ಬಾಬು ನೀಡಲಿದ್ದಾರೆ. ಐದು ಹಾಡುಗಳಲ್ಲಿ ಒಂದು ಹಾಡನ್ನು ನಟ ಶಿವರಾಜಕುಮಾರ ಮತ್ತು ಆರಂಭದ ಹಾಡನ್ನು ನಟ ಪುನಿತ ರಾಜುಕುಮಾರ ನಿಂದ ಹಾಡಿಸಲು ಉದ್ದೇಶಿಸಲಾಗಿದೆ. ನಿಘದಿತ ದಿನದೊಳಗೆ ಚಿತ್ರಿಕರಣ ಮುಗಿಸಲಿದ್ದೇವೆ ಎಂದು ತಿಳಿಸಿದರು. ಸಹನಟರಾಗಿ 40ಕ್ಕೂ ಹೆಚ್ಚು ಮತ್ತು ನಿಧರ್ೇಶಕರಾಗಿ ಆರು ಚಿತ್ರಗಳನ್ನು ನಿಮರ್ಿಸಿದೆ ಎಂದು ಬಳ್ಳಾರಿ ಮಂಜ ಚಿತ್ರದ ನಿಧರ್ೇಶಕರು ವಿವರಿಸಿದರು. ಈ ಚಿತ್ರವು ಜುಲೈ 12 ಶಿವರಾಜಕುಮಾರ ಅವರ ಹುಟ್ಟು ಹಬ್ಬದ ದಿನ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ವಿವರಿಸಿದರು.