ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಶಾಸಕ ಬಳ್ಳಾರಿ ಚಾಲನೆ
ಬ್ಯಾಡಗಿ : ಪಟ್ಟಣದ ತಾಲೂಕಾ ಪಂಚಾಯತಿ ಆವರಣದಲ್ಲಿ ರಾಜ್ಯ ಪ್ರವಾಸೋಧ್ಯಮ ಇಲಾಖೆ, ಹಾವೇರಿ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬ್ಯಾಡಗಿ ಇವರ ವತಿಯಿಂದ ಶಾಲಾ ವಿದ್ಯಾಥರ್ಿಗಳಿಗಾಗಿ ಆಯೋಜಿಸಿರುವ "ಕರ್ನಾಟಕ ದರ್ಶನ" ಪ್ರವಾಸ ಕಾರ್ಯಕ್ರಮಕ್ಕೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಶುಕ್ರವಾರ ಬೆಳಿಗ್ಗೆ 6ಗಂಟೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರವಾಸೋಧ್ಯಮ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಒದಗಿಸಿರುವ ಪ್ರವಾಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಶಾಲಾ ವಿದ್ಯಾರ್ಥಿ ಗಳಿಗಾಗಿ ವಿವಿಧ ಐತಿಹಾಸಿಕ ಹಾಗೂ ಪುಣ್ಯ ಕ್ಷೇತ್ರಗಳ ಪ್ರವಾಸದ ಭಾಗ್ಯವನ್ನು "ಕರ್ನಾಟಕ ದರ್ಶನ" ಎಂಬ ಯೋಜನೆಯ ಮೂಲಕ ಕಲ್ಪಿಸಿದ್ದು, ವಿದ್ಯಾರ್ಥಿಗಳು ಕ್ಷೇತ್ರಗಳ ಇತಿಹಾಸವನ್ನು ವೀಕ್ಷಣೆಯ ಜೊತೆ ತಿಳಿದುಕೊಳ್ಳಬಹುದಾಗಿದೆ.
ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಗೆ ಯಾವುದೇ ತೊಂದರೆಯಾಗದಂತೆ ಶಿಕ್ಷಕರು, ಪ್ರವಾಸೋಧ್ಯಮ ಇಲಾಖೆ ಸಿಬ್ಬಂದಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಶಾಲಾ ವಿದ್ಯಾರ್ಥಿ ಗಳಿಗೆ ಶುಭ ಕೋರಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ ಮಾತನಾಡಿ, ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಯ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 106 ಮಕ್ಕಳು 4ದಿನಗಳ ಕರ್ನಾಟಕ ದರ್ಶನ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಗೆ ಸರ್ಕಾರ 3600 ರೂಗಳನ್ನು ವೆಚ್ಚ ಮಾಡುತ್ತಿದೆ.
ಇದರಲ್ಲಿ ಮಕ್ಕಳಿಗೆ ಟೀಶರ್ಟ, ಕಿಟ್, ಊಟೋಪಚಾರ ವ್ಯವಸ್ಥೆ ಸೇರಿದಂತೆ ಇತರ ವೆಚ್ಚಗಳು ಸೇರಿವೆ. ಮಕ್ಕಳಿಗೆ ಬನವಾಸಿ, ಶಿರಸಿ, ಜೋಗ, ಹಾಸನ, ಬೇಲೂರು ಹಳೆಬೀಡು ಮತ್ತು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಭಾಗ್ಯ ಕೂಡಿ ಬಂದಿದೆ ಎಂದರುಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಫಕ್ಕೀರಮ್ಮ ಚಲುವಾದಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ಚಂದ್ರಣ್ಣ ಶೆಟ್ಟರ, ತಹಸೀಲ್ದಾರ ಎಸ್.ಎ.ಪ್ರಸಾದ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾಜರ್ುನ , ಶಿಕ್ಷಣ ಇಲಾಖೆಯ ಸಿಬ್ಬಂದಿಗಳಾದ ಬಸವರಾಜ ಸೋಮಕ್ಕಳವರ, ಸಿ.ಎಚ್.ಹಿರೇಮೊರಬ, ಪ್ರವಾಸೋದ್ಯಮ ಇಲಾಖೆಯ ಯಶವಂತ್ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು