ಬಳ್ಳಾರಿ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಅಂಕಲಯ್ಯ ಆಯ್ಕೆ
ಬಳ್ಳಾರಿ 14: ಬಳ್ಳಾರಿ ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಹೆಚ್.ಎಂ.ಅಂಕಲಯ್ಯ ಅವರು ಭರ್ಜರಿ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಚುನಾವಣಾ ಅಧಿಕಾರಿ ವೆಂಕಟೇಶ್ವರೆಡ್ಡಿ ನೇತೃತ್ವದಲ್ಲಿ ನಡೆದ ಮತದಾನ ಸಂಜೆ 6 ಗಂಟೆ ಸುಮಾರಿಗೆ ಮುಕ್ತಾಯಗೊಳಿಸಿದರು. ಮತ ಚಲಾಯಿಸಿದ 833 ಮತದಾರರ ಪೈಕಿ ಹೆಚ್.ಎಂ.ಅಂಕಲಯ್ಯ ಅವರಿಗೆ 437 ಮತ ಪಡೆದಿದ್ದು. ಪ್ರತಿ ಸ್ಪಧರ್ಿ ಡಿ.ಎಸ್ ಬದ್ರಿನಾಥ್ ಅವರಿಗೆ 326 ಹಾಗೂ ಮತ್ತೋರ್ವ ಅಭ್ಯಥರ್ಿ ಚಂದ್ರಶೇಖರರೆಡ್ಡಿ ಅವರಿಗೆ 63 ಮತಗಳು ಬಂದರೆ 7 ಮತಗಳು ಕುಲಗಟ್ಟಿವೆ.
ಇನ್ನೂ ಉಪಾಧ್ಯಕ್ಷರಾಗಿ ಸ್ವತಂತ್ರವಾಗಿ ಸ್ಪಧರ್ೆಮಾಡಿದ್ದ ಅಬ್ದುಲ್ ಮಾಜಿದ್ ಅವರಿಗೆ 247 ಮತಗಳು ಪಡೆವುದರ ಮೂಲಕ ಆಯ್ಕೆಯಾದರೆ ಉಳಿದಂತೆ ಈ ಸ್ಥಾನಕ್ಕೆ ಸ್ಪಧರ್ೆ ಮಾಡಿದ್ದ ಎ ಟಿಂನ ಬಿ.ಗೋಪಾಲ 239 ಮತಗಳನ್ನು ಪಡೆದು ಕೇವಲ 8 ಮತಗಳಿಂದ ಉಪಾಧ್ಯಕ್ಷಸ್ಥಾನದಲ್ಲಿ ಸೋತಿದ್ದಾರೆ. ಬಿ ಟಿಂ ನಲ್ಲಿ ಕೆ.ಗಾದಿಲಿಂಗಯ್ಯ 154 ಸ್ವತಂತ್ರ ಅಭ್ಯಥರ್ಿಗಳಾದ ಪಾಂಡುರಂಗ 174, ಶೇಖ್ ಜಾಪರಸಾಬ್ 12 ಮತಗಳು ಪಡೆದು 6 ಮತಗಳು ಕುಲಗಟ್ಟಿವೆ. ಈ ಸ್ಥಾನಕ್ಕೆ ಸ್ಪಧರ್ೆ ಮಾಡಿದ್ದ ಬಿ ಟಿಂನ ಎಸ್.ವಿ ಅರಸೂರು ಅವರು 419 ಮತ ಪಡೆದು ಆಯ್ಕೆಯಾದರೆ ಇವರು ಪ್ರತಿ ಸ್ಪಧರ್ಿ ಎ ಟಿಂನ ಹೆಚ್ ಶರಣಬಸವರಾಜ 334 ಮತ್ತು ಸ್ವತಂತ್ರ ಅಭ್ಯಥರ್ಿ ಜಿ.ಮಲ್ಲಿಕಾಜರ್ುನ ಕೇವಲ 78 ಮತಗಳು ಪಡೆದರು. 4 ಮತಗಳು ಕುಲಗಟ್ಟಿವೆ.
ಅದೇ ರೀತಿ ಖಜಾಂಚಿಸ್ಥಾನಕ್ಕೆ ಬಿ. ಟಿಂನ ಕೆ.ತಿಪ್ಪೆರುದ್ರ ಅವರು 399 ಮತಗಳನ್ನು ಪಡೆದು ಆಯ್ಕೆಯಾಗಿದ್ದು ಅವರ ಪ್ರತಿಸ್ಪಧರ್ಿ ಎ ಟಿಂನ ಕೆ.ಎನ್.ವಿರೇಶ್ 373 ಮತಗಳನ್ನು ಮತ್ತು ಸ್ವತಂತ್ರ ಅಭ್ಯಾಥಿ ಕೆ.ಜೆ.ಬಸವರಾಜ 58 ಮತಗಳನ್ನು ಪಡೆದರೆ 3 ಮತಗಳು ಕುಲಗಟ್ಟಿವೆ.
ಅದೇ ರೀತಿ ಮಹಿಳೆಯರಿಗೆ ಮೀಸಲಿದ್ದ ಜಂಟಿಕಾರ್ಯದಶರ್ಿ ಸ್ಥಾನಕ್ಕೆ ಎಂ.ಪುಸ್ಪಲತಾ ಅವರು 457 ಮತಗಳನ್ನು ಪಡೆದು ಆಯ್ಕೆಯಾದರೆ ಇವರ ಪ್ರತಿಸ್ಪಧರ್ಿ ಜಿ.ಶ್ಯಾಮಲ ಯಾದವ್ 371 ಮತಗಳನ್ನು ಪಡೆದರು ಇನ್ನೂ ಕಾರ್ಯಕಾರಿ ಸಮಿತಿಯಲ್ಲಿ ಮಿಸಲಿದ್ದ ಸ್ಥಾನದಲ್ಲಿ ಅನುರಾಧ.ಎಂ ಅವರು 481 ಮತಗಳನ್ನು ಪಡೆದು ಆಯ್ಕೆಯಾದರೆ ಅವರ ಪ್ರತಿಸ್ಪಧರ್ಿ ಎಂ.ಗೌಸಿಯಾ ಅವರು 345 ಮತಗಳನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ.