ಬಳ್ಳಾರಿ: ಎಸ್.ಯು.ಸಿ.ಐ ಪಕ್ಷದ ಕಾರ್ಯಕರ್ತರ ಬೆಂಬಲಿಗರ ಸಭೆ

ಬಳ್ಳಾರಿ: ಎಸ್.ಯು.ಸಿ.ಐ ಪಕ್ಷದ ಕಾರ್ಯಕರ್ತರ ಬೆಂಬಲಿಗರ ಸಭೆ

ಲೋಕದರ್ಶನ ವರದಿ

ಬಳ್ಳಾರಿ 29: ಲೋಕಸಭಾ ಕ್ಷೇತ್ರದಿಂದ ಎಸ್.ಯು.ಸಿ.ಐ ಅಭ್ಯರ್ಥಿಯಾಗಿ ಕಾ.ದೇವದಾಸ್ ಅವರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ, ನಿನ್ನೆ ಸಂಜೆ ವಿವಿಧ ಗ್ರಾಮಗಳು, ವಿವಿಧ ತಾಲ್ಲೂಕುಗಳಿಂದ ಬಂದ ಎಸ್.ಯು.ಸಿ.ಐ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಸಭೆಯನ್ನು ಗಾಂಧಿ ಭವನದಲ್ಲಿ ನಡೆಸಲಾಯಿತು. 

ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕಾ.ಸೋಮಶೇಖರ್ ಪ್ರಾಮಾಣಿಕ ಕಾರ್ಯಕರ್ತರು, ಬೆಂಬಲಿಗರು ನಮ್ಮ ಪಕ್ಷದ ಆಸ್ತಿಯಿದ್ದಂತೆ, ಅಷ್ಟೇ ಅಲ್ಲದೆ ಇಡೀ ಸಮಾಜದ ಆಸ್ತಿಯಿದ್ದಂತೆ. ಇಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುವ ಕಾರ್ಯಕರ್ತರು ಮಹಾನ್ ಮಾಕ್ಸರ್್ವಾದಿ ಚಿಂತಕರಾದ ಕಾಶಿವದಾಸ್ ಘೋಷರ ಚಿಂತನೆಗಳಿಗೆ ಆಕರ್ಷಿತರಾದವರು, ಪಕ್ಷ ಕಟ್ಟುತ್ತಿರುವ ನೂರಾರು ಹೋರಾಟಗಳಿಂದ ಪ್ರೇರಿತರಾದವರು. ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಸಾಮಾಜಿಕ ಹೋರಾಟಗಳನ್ನು ಕಟ್ಟಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಚುನಾವಣೆಯನ್ನು ಸಹ ಹೋರಾಟದ ಭಾಗವಾಗಿ ತೆಗೆದುಕೊಂಡು ಉರಿಯುವ ಬಿಸಿಲನ್ನು ಲೆಕ್ಕಿಸದೆ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸ್ಪೋರ್ತಿಯನ್ನು ಕೊನೆಂವರೆಗೂ ಉಳಿಸಿಕೊಂಡು, ಜನರ ನಡುವೆ ಪ್ರಚಾರ ಕಾರ್ಯವನ್ನು ಬಿರುಸಾಗಿ ನಡೆಸುತ್ತಾ, ಬಂಡವಾಳಶಾಹಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಗಳ ನಿಜ ಬಣ್ಣವನ್ನು ಬಯಲಿಗೆಳೆಯಬೇಕು. ಹಾಗೆಯೇ ನಮ್ಮ ವಿಚಾರಗಳನ್ನು ಹೆಚ್ಚಿನ ಸಂಖ್ಯೆಯ ಜನರತ್ತ  ತೆಗೆದುಕೊಂಡು ಹೋಗಲು ನಾವೆಲ್ಲ ಸನ್ನದ್ಧರಾಗಬೇಕು. ಜಾಥಾ, ಆಟೋ ಪ್ರಚಾರ, ಮನೆ ಮನೆ ಪ್ರಚಾರ, ಸಾರ್ವಜನಿಕ ಸಭೆಗಳು, ಬೀದಿ ಬದಿಯ ಸಭೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿ, ಜನರ ಮನಸ್ಸನ್ನ ಗೆಲ್ಲಬೇಕು ಎಂದು ಕರೆ ನೀಡಿದರು. 

ಈ ಸಭೆಯಲ್ಲಿ ಅಭ್ಯರ್ಥಿ  ದೇವದಾಸ್, ಪಕ್ಷದ ಜಿಲ್ಲಾ ಕಾರ್ಯದಶರ್ಿ ರಾಧಾಕೃಷ್ಣ ಉಪಾಧ್ಯ, ಮಂಜುಳಾ, ನಾಗಲಕ್ಷ್ಮಿ, ಡಾ.ಪ್ರಮೋದ್, ಹನುಮಪ್ಪ, ಗೋವಿಂದ್ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ