ಬಳ್ಳಾರಿ: ಶ್ರೀನಿವಾಸ ಮೂರ್ತಿಗೆ ಡಾಕ್ಟರೇಟ್ ಪದವಿ ನೀಡಿ ಪುರಸ್ಕಾರ

ಬಳ್ಳಾರಿ: ಶ್ರೀನಿವಾಸ ಮೂರ್ತಿಗೆ ಡಾಕ್ಟರೇಟ್ ಪದವಿ ನೀಡಿ  ಪುರಸ್ಕಾರ

ಬಳ್ಳಾರಿ 18:ಗುಲ್ಬರ್ಗಾ  ವಿಶ್ವವಿದ್ಯಾಲಯ ಕಲಬುರಗಿಯ ಅಂಬೇಡ್ಕರ್ ಭವನದಲ್ಲಿ ನಡೆದ 37 ನೇ ಘಟಿಕೋತ್ಸವದಲ್ಲಿ ಬಳ್ಳಾರಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯು. ಶ್ರೀನಿವಾಸ ಮೂರ್ತಿ , ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು. ಇವರು ಗುಲ್ಬರ್ಗಾ ವಿ.ವಿ,ಯ ಶಿಕ್ಷಣದ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಡೀನ್ ಹಾಗೂ ಪ್ರೊಫೇಸರ್ ಆದ ಡಾ|| ಸುರೇಖಾ ಕ್ಷೀರ ಸಾಗರ ಇವರ ಮಾರ್ಗದರ್ಶನದಲ್ಲಿ "ಎ ಸ್ಟಡಿ ಆಫ್ ಸ್ರ್ಟೆಸ್ ಅಂಡ್ ಯ್ಯಾಂಗ್ಸೈಟಿ  ಅಮಾಂಗ್ +2 ಸೈನ್ಸ್ ಸ್ಟುಡೆಂಟ್ಸ್  ಇನ್ ರಿಲೇಷನ್ ಟು ದೈರ್ ಸೋಷಿಯೋಎಕೊನಾಮಿಕ್ ಸ್ಟೇಟಸ್ ಅಂಡ್ ಅಕಾಡೆಮಿಕ್ ಅಚಿವ್ ಮೆಂಟ್. ಎಂಬ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧವನ್ನು  ಮಂಡಿಸಿದ್ದಾರೆ. ಪಿ ಯು ಹಂತದ ವಿದ್ಯಾರ್ಥಿಗಳ  ಮೇಲೆ ಪಾಲಕರು ತಮ್ಮ ಮಕ್ಕಳನ್ನು ವೈದ್ಯಕೀಯ ಅಥವಾ ಇಂಜನೀಯರಿಂಗ್ ಗೇ ಕಳಿಸಬೇಕೆಂಬ ಭರದಲ್ಲಿ ಮಕ್ಕಳ ಮೇಲೆ ಹೆಚ್ಚು ಹೆಚ್ಚು ಅಧ್ಯಯನ ಮಾಡಲು ಒತ್ತಡ ಹಾಕುವುದರಿಂದ ಉಂಟಾಗುವ ಒತ್ತಡ ಹಾಗು ಆತಂಕವನ್ನು  ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ  ಮೇಲೆ ಉಂಟಾಗುವ ಅಡ್ಡ ಪರಿಣಾಮಗಳನ್ನು ಕುರಿತು ಅಧ್ಯಯನವು ಬೆಳಕು ಚೆಲ್ಲುವುದರೊಂದಿಗೆ ಪರಿಹಾರಗಳನ್ನು ನೀಡಿದೆ.  


ಸುದ್ದಿ ಓದಿ