ಬಳ್ಳಾರಿ: ಶ್ರೀಧನ್ವಂತ್ರಿ ಹೋಮ, ನೂತನ ಪಂಚಾಂಗ ಬಿಡುಗಡೆ ಸಮಾರಂಭ
ಬಳ್ಳಾರಿ 12: ನಗರದ ಸತ್ಯನಾರಾಯಣ ಪೇಟೆ ಶ್ರೀರಾಘವೇಂಧ್ರ ಸ್ವಾಮೀ ಮಂಗಲ ಭವನದಲ್ಲಿ ಶ್ರೀಧನ್ವಂತ್ರಿ ಹೋಮ ಹಾಗೂ 2019-20ನೇ ಸಾಲಿನ ನೂತನ ಪಂಚಾಂಗ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನರು ಹೋಮ, ಹವನದಲ್ಲಿ ಭಾಗವಹಿಸಿ ಭಕ್ತಿ ಸಮಪರ್ಿಸಿದರು. ಜೋತಿಷಿ ಶ್ರೀಗುರುರಾಜ ಕುಲಕರ್ಣಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀರಾಘವೇಂದ್ರ ಸ್ವಾಮೀ ಮಠದ ವ್ಯವಸ್ಥಾಪಕ ಶ್ರೀ ಎಂ.ವಿ.ಬ್ರಹ್ಮಣ್ಯಾಚಾರ್, ರಾಯಚೂರಿನ ವಿದ್ವಾಂಸರಾದ ಶ್ರೀ ಅಕ್ಕಿ ರಾಘವೇಂಧ್ರಾಚಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚಾಗದ ಮಹತ್ವದ ಕುರಿತು ತಿಳಿಸಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮಪರ್ಿಸಿದರು. ಕುಮಾರಿ ಸೃಷ್ಠಿ ಹಾಗೂ ಅಂಗಡಿಗರಿಂದ ಭಕ್ತಿಗೀತೆ ಗಾಯನ ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ್ ಕುಲಕಣರ್ಿ, ಕಾಂಡ್ರಾ ಸತೀಶ್, ಭರತ್ ಕುಮಾರ್, ಪಿ.ಸುಬ್ರಹ್ಮಣ್ಯ, ಗಿರಿ, ಗಿರಿ ಕುಲಕಣರ್ಿ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು. ಶಿಲ್ಪಾ ಕಾರ್ಯಕ್ರಮ ನಿರ್ವಹಿಸಿದರು.