ಬಳ್ಳಾರಿ: ರಾಜ್ಯದ ಏಳು ಕ್ಷೇತ್ರಗಳಲ್ಲಿ ಎಸ್.ಯು.ಸಿ.ಐ ಪಕ್ಷ ಕಣಕ್ಕೆ
ಬಳ್ಳಾರಿ 25: 17ನೇ ಲೋಕಸಭೆಗಾಗಿ ಚುನಾವಣೆ ಘೋಷಣೆಯಾಗಿದೆ. ಈ ಬಾರಿ ಅಂಡಮಾನ್ ನಿಕೋಬಾರ್ ಸೇರಿದಂತೆ, ದೇಶದ 20 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 118 ಸ್ಥಾನಗಳಲ್ಲಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದಾರೆ. ಕನರ್ಾಟಕದಲ್ಲಿ ಕಲಬುರಗಿ, ರಾಯಚೂರುಯಾದಗಿರಿ, ಬಳ್ಳಾರಿ, ದಾವಣಗೆರೆ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮೈಸೂರು ಈ 7 ಸ್ಥಾನಗಳಲ್ಲಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷವು ಸ್ಪಧರ್ಿಸಲಿದೆ. ಬಳ್ಳಾರಿ-ಎಸ್.ಟಿ ಲೋಕಸಭಾ ಕ್ಷೇತ್ರದಿಂದ ಕಾಮ್ರೇಡ್. ದೇವದಾಸ್ ಸ್ಪಧರ್ಿಸಲಿದ್ದಾರೆ ಎಂದು ಸೋಮುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಮುಖಂಡರುಗಳು ಮಾತನಾಡಿ ರಾಜ್ಯಗಳು ಮತ್ತು ಮೂರು ಕೇಂದ್ರ ಆಡಳಿತ ಪ್ರದೇಶಗಳ 118 ಕ್ಷೇತ್ರಗಳಲ್ಲಿ ನಮ್ಮ ಪಕ್ಷದಿಂದ ಅಭ್ಯಾಥರ್ಿಗಳು ಕಣಕ್ಕಿಳಿಯಲಿದ್ದಾರೆ ಎಂದರು. ರಾಜ್ಯದ ಬಳ್ಳಾರಿ, ಗುಲ್ಬರ್ಗ, ರಾಯಚೂರು, ದಾವಣಗೇರೆ, ದಾರವಾಡ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು, ಕೊಡಗು ಕ್ಷೇತ್ರದಲ್ಲಿ ಸ್ಫರ್ಧೆ ಮಾಡಲಿದೆ. ಬಳ್ಳಾರಿ ಕ್ಷೇತ್ರದಿಂದ ಎ.ದೇವದಾಸ್ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದರು. ಅನೇಕ ಚುನಾವಣಾಗಳಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಿತ್ತು. ಆದರೆ ಒಂದು ಕ್ಷೇತ್ರದಲ್ಲಿ ಜಯ ಸಾದಿಸಲಾಗಿಲ್ಲ. ಇದಕ್ಕೆ ಕಾರಣ ಬಂಡವಾಳ ಶಾಹಿಗಳ ಇತ ಕಾಪಾಡುವ ಪಕ್ಷದ ಹಣದ ಬಲದಿಂದಾಗಿದೆ ಎಂದರು.
ಸಾಕಷ್ಟು ಜ್ವಲಂತ ಸಮಸ್ಯಗಳ ವಿರುದ್ದ ಹೋರಾಟಗಳನ್ನು ಮಾಡುತ್ತಿವೆ. ಆದರೆ ಅಭಿಪ್ರಾಯ ಮೂಡಿಸಲು ಎಲೆಕ್ಟ್ರಾನಿಕ್ ಮಾದ್ಯಗಳ ಸಹಕಾರ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಕಳೆದ 5 ವರ್ಷದ ಮೋದಿ ಆಳ್ವಿಕೆ ಸಂಪೂರ್ಣ ಜನವಿರೋಧಿ, ಬುಡಮಟ್ಟದಲ್ಲಿ ಜನಸಾಮಾನ್ಯರ ಪಾಡೇನಾಗಿದೆ! ರೈತರ, ಕಾಮರ್ಿಕರ, ಯುವಜನರ, ಸಣ್ಣ ವ್ಯಾಪಾರಿಗಳ, ಮಹಿಳೆಯರ ಹೀಗೆ ಪ್ರತಿಯೊಬ್ಬರ ಬದುಕು ಇಂದು ಸಂಕಷ್ಟಮಯವಾಗಿದೆ. 'ಅಚ್ಚೇ ದಿನ್ ತರುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸಕರ್ಾರ ದೊಡ್ಡ ಬಂಡವಾಳಶಾಹಿಗಳ ಏಜೆಂಟನಂತೆ ವತರ್ಿಸಿದೆ, ಜನರ ಹಿತವನ್ನು ಕಸದಬುಟ್ಟಿಗೆಸೆದಿದೆ. ಮೋದಿ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ನೋಟು ರದ್ಧತಿ ಮತ್ತು ಜಿಎಸ್ಟಿಯಿಂದಾಗಿ ಮಿಲಿಯಾಂತರ ಉದ್ಯೋಗಗಳು ನಾಶವಾಗಿವೆ. ಸಣ್ಣ ಉದ್ಯಮಗಳು ದಿವಾಳಿಯಾಗಿವೆ. ಕಳೆದ 45 ವರ್ಷಗಳಲ್ಲೆ ಅತಿ ಹೆಚ್ಚು ನಿರುದ್ಯೋಗ ಮೋದಿ ಅಧಿಕಾರದ ಅವಧಿಯಲ್ಲಿ ದಾಖಲಾಗಿದೆ. ಇದನ್ನು ಸಕರ್ಾರಿ ಸಂಸ್ಥೆ ಎನ್ಎಸ್ಎಸ್ಓ ವರದಿ ಮಾಡಿದೆ.
ಮಾ.28ರಂದು ಬಳ್ಳಾರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು ಹೋರಾಟವೇ ನಮ್ಮ ಉಸಿರಾಗಿರುವುದರಿಮದ ಸಂಸತ್ ನಲ್ಲಿ ನಮ್ಮ ಸಮಸ್ಯಗಳ ಬಗ್ಗೆ ದ್ವನಿ ಎತ್ತಲು ಜನರು ನಮಗೆ ಮತ ನೀಡಬೇಕೆಂದು ಕೋರಿದರು. ಈ ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ರಾದಕೃಷ್ಣ ಉಪದ್ಯಾಯ, ಎಂ.ಎನ್.ಮಂಜುಳಾ, ನಾಗಲಕ್ಷ್ಮಿ, ಶಾಂತಾ, ಸೋಮಶೇಖರಗೌಡ, ಗೊವಿಂದರಾಜ, ಹನುಮಪ್ಪ, ಡಾ.ಪ್ರಮೋದ್, ಸುರೇಶ ಸೇರಿದಂತೆ ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.