ಬಳ್ಳಾರಿ: ಜಿಲ್ಲಾ ಉಸ್ತುವಾರಿಯಿಂದ ಡಿಕೆ ಶಿವಕುಮಾರ ಅವರನ್ನು ಕೈಬಿಡಲು ಎಸ್.ಆರ್.ಹಿರೇಮಠ ಆಗ್ರಹ
ಬಳ್ಳಾರಿ 16: ಬಳ್ಳಾರಿ ಜಿಲ್ಲೆಯ ಗಣಿಬಾದಿತ ಜನರ ಅಭಿವೃದ್ದಿಗಾಗಿ ಮಿಸಲಿಟ್ಟಿರುವ ಮೈನಿಂಗ್ಫಂಡ್ 16 ಸಾವಿರ ಕೋಟಿ ರೂ ಅನುದಾನವನ್ನು ದರೋಡೆಮಾಡಲು ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ ಅವರನ್ನು ಉಸ್ತುವಾರಿಯಿಂದ ಮತ್ತು ಸಚಿವ ಸಂಪುಟದಿಂದ ವಜಾ ಮಾಡಬೇಕಂದು ಸಮಾಜ ಪರಿವರ್ತನ ಸಮೂದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಹಾನಿಯಾದ ಪ್ರದೇಶದ ಜನರ ಆರೋಗ್ಯ, ರಸ್ತೆ, ಕುಡಿಯುವ ನೀರು, ಶಿಕ್ಷಣ, ಸೇರಿದಂತೆ ಅವರ ಉಪಜೀವನಕ್ಕಾಗಿ ಈ ಹಣವನ್ನು ಬಳಕೆಮಾಡಲು ಸುಪ್ರೀಂಕೊಟರ್್ ಆದೇಶ ನೀಡಿದೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ ಅವರು ಈ ಅನುದಾನವನ್ನು ಲೂಟಿಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಜನವಿರೋದಿ, ಸಂವಿದಾನ ವಿರೋದಿ ಡಿ.ಕೆ ಶಿವಕುಮಾರ ಮತ್ತು ಅವರ ಸಹೊದ್ಯೋಗಿಗಳ ಕಣ್ಣು 16 ಸಾವಿರ ಕೋಟಿ ರೂ ಮೈನಿಂಗ್ಫಂಡ್ ಮೇಲೆ ಬಿದ್ದಿದೆ. ಈ ಹಣವನ್ನು ದರೊಡೆ ಮಾಡಲು ಅಕ್ರಮ ಸಂಪಾದನೆ ಮಾಡಲು ಡಿ.ಕೆ.ಶಿ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾರೆ ಎಂದು ದೂರಿದರು. ಕಾಂಗ್ರೆಸ್ಪಕ್ಷ ಮತ್ತು ಅದರ ನೇತೃತ್ವ ವಹಿಸಿದ ರಾಹುಲ್ ಗಾಂಧಿ ಅವರು ಜನರ ಪರವಾಗಿ ಇರುವ ರೀತಿಯಲ್ಲಿ ನಾಟಕ ಮಾಡುತ್ತಿದ್ದಾರೆ.
ಈ ದೇಶದ ಧರ್ಮ, ನ್ಯಾಯ, ನೀತಿ, ಸಂಪ್ರದಾಯಗಳು ಗೊತ್ತಿದ್ದರೇ ರಾಜಕೀಯ ಇಚ್ಚಾಶಕ್ತಿ ಇದ್ದರೇ ಕೂಡಲೇ ಡಿ.ಕೆ ಶಿವಕುಮಾರ ಅವರನ್ನು ಸಂಪುಟದಿಂದ ಕೈಬಿಟ್ಟು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಈ ಮೈನಿಂಗ್ಫಂಡ್ ದುರುಪಯೋಗ ಆಗಬಾರದು. ಎಂಬ ಉದ್ದೇಶದಿಂದ ಗಣಿಬಾದಿತ ಜನರ ಅಭಿವೃದ್ದಿ ಸಮಿತಿ ದೃಡಸಂಕಲ್ಪದಿಂದ ಹೋರಾಟ ಮಾಡುತ್ತಿದೆ ಎಂದು ತಿಳಿಸಿದ ಅವರು ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಅಕ್ರಮ ಗಣಿಗಾರಿಒಕೆ ನಡೆಸುತ್ತಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ಒತ್ತಾಯಿಸಿದರು.
ಈ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ಅಕ್ರಮ ಸಂಪಾದನೆ ಮಾಡಿರುವವರ ವಿರುದ್ದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನ ಸಾಥ್ವಿಕ ಶಕ್ತಿಗಳು ಒಂದುಗೂಡಿ ಹೋರಾಟ ನಡೆಸಲು ಮುಂದಾಗಬೇಕು ಎಂದು ವಿವರಿಸಿದರು. ದೇಶ ಮತ್ತು ರಾಜ್ಯದಲ್ಲಿ ಇರುವ ಎಲ್ಲಾ ಸರಕಾರಗಳು ಜನರ ಪರವಾಗಿಲ್ಲ. ಹಣ ಸಂಪಾದನೆಯಲ್ಲಿ ತೊಡಗಿದೆ. ಇಂತಹ ಸರಕಾರಗಳಿಗೆ ಜನಜಾಗೃತಿ ಮೂಲಕವೇ ತಕ್ಕ ಪಾಠ ಕಳಿಸಬೇಕು ಎಂದು ತಿಳಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ಮುಖಂಡರುಗ ಚಂದ್ರಶೇಖರ ಮೇಟಿ, ಸೋಮಶೇಖರಗೌಡ, ಎ.ದೇವದಾಸ್, ಹಾಲ್ದಳ್ಳಿ ಶ್ರೀಶೈಲ, ಸೇರಿದಂತೆ ನೂರಾರು ಜನ ರೈತರು ಭಾಗವಹಸಿದ್ದರು.